ದಲಿತರಿಗಾಗಿ ಮೀಸಲಿಟ್ಟಿರುವ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ – ಅಖಿಲ ಕರ್ನಾಟಕ ದಲಿತ ಒಕ್ಕೂಟ

ಬೆಂಗಳೂರು, ಫೆ.10- ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಲಿತರಿಗಾಗಿ ಮೀಸಲಿಟ್ಟಿರುವ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ  ಎಂದು ಅಖಿಲ ಕರ್ನಾಟಕ ದಲಿತ ಒಕ್ಕೂಟ ಇಂದಿಲ್ಲಿ ಆರೋಪಿಸಿದ್ದು, ಕೂಡಲೇ ಈ ಪ್ರಕ್ರಿಯೆಯನ್ನು ಸರ್ಕಾರ ತಡೆಹಿಡಿಯಬೇಕೆಂದು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಬೆಳಂದೂರು ಕೆಂಪೇಗೌಡ ಮಾತನಾಡಿ, ಸರ್ಕಾರ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಅನುದಾನ ಹಂಚಿಕೆ 2013ರ ಕಾಯ್ದೆ ಜಾರಿಗೆ ತಂದು ಕಲಾವಿದರ ಅನುಕೂಲಕ್ಕೆಂದು 2017ನೆ ಸಾಲಿನಲ್ಲಿ 74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅನುದಾನದ ಹಣವನ್ನು ನಿರ್ದಿಷ್ಟ ಕಾರ್ಯಕ್ರಮಗಳಿಗೆ ವ್ಯಯ ಮಾಡಬೇಕಾದ ಇಲಾಖೆ ಅಧಿಕಾರಿಗಳೇ ಹಣ ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ