ಹಾರ್ವರ್ಡ್ :ಫೆ-11: ಸೂಪರ್ ಸ್ಟಾರ್ ರಜನಿಕಾಂತ್ ಅವರದ್ದು ಕೇಸರಿ ಬಣ್ಣವಲ್ಲ ಎಂದು ಭಾವಿಸುತ್ತೇನೆ ಒಂದೊಮ್ಮೆ ಅವರದ್ದು ಕೇಸರಿ ಬಣ್ಣವಾದರೆ ಅವರೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ನಟ ಕಮಲ್ ಹಾಸನ್ ತಿಳಿಸಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ನಟ ಕಮಲ್ ಹಾಸನ್, ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ತಮಿಳುನಾಡು ನಿರ್ಮಾಣ, ತಮ್ಮ ಕನಸು ಆಗಿದ್ದು, ಈ ಉದ್ದೇಶ ಸಾಧನೆಗಾಗಿ ತಮ್ಮ ಸಮಕಾಲಿನ ನಟ ರಜನಿಕಾಂತ್ ಅವರೊಂದಿಗೆ ಮೈತ್ರಿಗೂ ಸಿದ್ಧ. ಆದರೆ ಅವರದ್ದು ಕೇಸರಿ ಬಣ್ಣ ಅಲ್ಲವಾದರೆ ಮೈತ್ರಿ ಸಾಧ್ಯ ಎಂದು ತಿಳಿಸಿದ್ದಾರೆ.
ನಟ ರಜನಿಕಾಂತ್ ಇತ್ತೀಚಿಗೆ ರಾಜಕೀಯ ಪ್ರವೇಶಿಸಿದ್ದಾರೆ. ಅಗತ್ಯಬಿದ್ದಾಗ ನಾವಿಬ್ಬರೂ ಜೊತೆಯಾಗಿ ಕಾರ್ಯನಿರ್ವಹಿಸುವುದಾಗಿ ಕಮಲ್ ಹೇಳಿದ್ದು, ಕೆಂಪು ನನ್ನ ರಾಜಕೀಯ ಹೊದಿಕೆ ಅಲ್ಲ. ರಜನಿಕಾಂತ್ ಅವರದ್ದು ಕೇಸರಿ ಬಣ್ಣ ಅಲ್ಲ ಎಂದು ನಾನು ಭಾವಿಸುತ್ತೇನೆ. ಅವರದ್ದು ಕೇಸರಿ ಬಣ್ಣವಲ್ಲದಿದ್ದರೆ ಅವರೊಂದಿಗೆ ಮೈತ್ರಿ ಸಾಧ್ಯ ಎಂಬ ವಿಶ್ವಾಸವ್ಯಕ್ತಪಡಿಸಿದರು.
ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ಬದಲಾಣೆಯ ಏಜೆಂಟ್ ಎಂದು ಘೋಷಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಆಡಳಿತದ ಗುಣಮಟ್ಟವನ್ನು ಹೆಚ್ಚಿಸುವುದು ಇಬ್ಬರ ಬಯಕೆಯಾಗಿದೆ. ಡಿಸೆಂಬರ್ 31ರಂದು ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಿದ್ದು, ಇಬ್ಬರು ನಟರು, ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸುವ ಮಾತುಗಳನ್ನಾಡಿದ್ದಾರೆ.
ಫೋಟೋ ಕ್ರೆಡಿಟ್: Yahoo News India