ಜೈ ಸಿಯಾ ರಾಮ್ ಎಂದ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನಹ್ಯಾನ್

ಅಬುದಾಬಿ:ಫೆ-11: ಮುಸ್ಲಿಂ ರಾಷ್ಟ್ರದ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನಹ್ಯಾನ್ ‘ಜೈ ಸೀಯಾ ರಾಮ್’ ಎಂದು ಭಾಷಣ ಆರಂಭಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಧಾನಿ ಮೋದಿ ದುಬೈ ಭೇಟಿ ನೀಡಿರುವ ಈ ಸಂದರ್ಭದಲ್ಲೇ  ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನಹ್ಯಾನ್ ಅವರು ಜೈ ಸಿಯಾ ರಾಮ್ ಎಂದು ಹೇಳಿರುವ ವಿಡಿಯೋ ಭಾರೀ ಸುದ್ದಿ ಮಾಡುತ್ತಿದೆ. ಮೊರಾರಿ ಬಾಪು ಅವರ ನೇತೃತ್ವದ ರಾಮ ಕಥಾ ಕಾರ್ಯಕ್ರಮದಲ್ಲಿ ಅಲ್ ನಹ್ಯಾನ್ ಈ ಘೋಷಣೆ ಮಾಡಿದ್ದಾರೆ.

2016ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿರುವ ರಾಮಕಥಾ ಕಾರ್ಯಕ್ರಮದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ