ಜಿಎಸ್ ಟಿ ಕುರಿತ ಸಂದೇಹಗಳಿಗೆ ಉತ್ತರಿಸಲು 8 ಅಧಿಕಾರಿಗಳ ನೇಮಕ ಮಾಡಿದ ವಿತ್ತ ಸಚಿವಾಲಯ

ನವದೆಹಲಿ:ಫೆ-11: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕುರಿತ ಸಂದೇಹ/ ಪ್ರಶ್ನೆಗಳಿಗೆ ಟ್ವಿಟರ್‌ ಅಥವಾ ಇ-ಮೇಲ್‌ ಮೂಲಕ ಉತ್ತರಿಸಲು 8 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಈ ಅಧಿಕಾರಿಗಳು ಸಹಾಯಕ ಕಮಿಷನರ್‌ಗಳಾಗಿದ್ದು, ಅವರನ್ನು ಸಚಿವಾಲಯದ ಅಧೀನದಲ್ಲಿರುವ ಅಕ್ಕಪಕ್ಕದ ಕಮಿಷನರೇಟ್‌ಗಳಿಂದ ಆಯ್ಕೆ ಮಾಡಲಾಗಿದೆ. ರಾಜ್‌ ಕರಣ್‌ ಅಗರ್ವಾಲ್‌, ರಜನಿ ಶರ್ಮಾ, ರೌನಕ್ ಜಮೀಲ್‌ ಅನ್ಸಾರಿ, ಶಂತನು, ಬುಲ್ಲೋ ಮಾಮು, ಹೀರಾ ಲಾಲ್‌, ಮನೀಶ್‌ ಚೌಧುರಿ ಮತ್ತು ಅಂಶಿಕಾ ಅಗರ್ವಾಲ್‌ ಅವರು ತೆರಿಗೆದಾರರ ಸಂದೇಹಗಳನ್ನು ಬಗೆಹರಿಸಲಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಸಂಖ್ಯೆಯ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿರುವುದರಿಂದ ಈ ಅಧಿಕಾರಿಗಳನ್ನು ಜಿಎಸ್‌ಟಿ ಕುರಿತು ಸಾಮಾಜಿಕ ತಾಣಗಳ ಮೂಲಕ ಉತ್ತರಿಸಲೆಂದೇ ನಿಯುಕ್ತಿಗೊಳಿಸಲಾಗಿದೆ.

 

ಫೋಟೋ ಕ್ರೆಡಿಟ್: wikimedia (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ