
ಲಾಹೋರ್:ಫೆ-3: ತನ್ನನ್ನು ಗೃಹ ಬಂಧನದಲ್ಲಿರಿಸಿದ್ದು, ನರೇಂದ್ರ ಮೋದಿ ಸರ್ಕಾರವಲ್ಲ, ಪಾಕಿಸ್ತಾನ ಸರ್ಕಾರ ಎಂದು ಮುಂಬೈ ದಾಳಿ ರೂವಾರಿ, ಜಮಾತ್-ಉದ್ -ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಝ್ ಸಯೀದ್ ಹೇಳಿದ್ದಾನೆ.
ಲಾಹೋರಿನಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಆತ, ಕಾಶ್ಮೀರ ವಿಷಯವನ್ನೆತ್ತುವುದನ್ನು ತಡೆಯುವ ಉದ್ದೇಶಸ್ದಿಂದ ಪಾಕಿಸ್ತಾನ ಸರ್ಕಾರ ತನ್ನನ್ನು ಹತ್ತು ತಿಂಗಳು ಗೃಹಬಂಧನದಲ್ಲಿರಿಸಿತ್ತು ಎಂದು ಆರೋಪಿಸಿದ್ದಾನೆ.
ಕಾಶ್ಮೀರಿಗಳ ತ್ಯಾಗವನ್ನು ಇಸ್ಲಾಮಾಬಾದ್ ಏಕೆ ಕಡೆಗಣಿಸುತ್ತಿದೆ ಎಂಬುದು ತಮಗೆ ಮನವರಿಕೆಯಾಗಿಲ್ಲ. ಪ್ರಧಾನಿ ಶಾಹಿದ್ ಅಬ್ಬಾಸಿ ಸಚಿವ ಸಂಪುಟದ ಇತರ ಸಚಿವರು ಸಭೆ ಸೇರಿ ಕಾಶ್ಮೀರಕ್ಕೆ ತಮ್ಮ ಬೆಂಬಲವನ್ನು ಘೋಷಿಸಬೇಕು ಎಂದು ಸಯೀದ್ ಆಗ್ರಹಿಸಿದ್ದಾನೆ.
Photo Credit: Dawn.com