ಗೋಲ್ಡ್ ಕೋಸ್ಟ್, ಏ.14-ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಭಾರತಕ್ಕೆ ಚಿನ್ನ ಮತ್ತು ರಜತ ಪದಕಗಳು ಕಟ್ಟಿಟ್ಟ ಬುತ್ತಿ. ಏಕೆಂದರೆ ಫೈನಲ್ನಲ್ಲಿ ದೇಶದ ಹೆಮ್ಮೆಯ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಯಾರು ಗೆದ್ದರೂ ಭಾರತಕ್ಕೆ ಹೆಮ್ಮೆ. ಅಲ್ಲದೇ ಬಂಗಾರ-ಬೆಳ್ಳಿ ಪದಕಗಳೆರಡೂ ಲಭಿಸುವ ಸಂತಸ.
ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ಕೆನಡಾದ ಪ್ರಬಲ ಮಿಚೆಲ್ಲೇ ಲೀ ಅವರನ್ನು 21-18, 21-8ರಲ್ಲಿ ಮಣಿಸಿ ಅಂತಿಮ ಸುತ್ತು ಪ್ರವೇಶಿಸಿದರು. ಈಗಾಗಲೇ ಫೈನಲ್ ತಲುಪಿರುವ ದಿಟ್ಟ ಅಟಗಾತಿ ಸೈನಾ ನೆಹ್ವಾಲ್ರನ್ನು ಸಿಂಧು ಎದುರಿಸಲಿದ್ದು, ಈ ಪಂದ್ಯ ಭಾರತೀಯ ಕ್ರೀಡಾ ಪಟುಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ.
ಮತ್ತೊಂದು ಸೆಮಿ ಫೈನಲ್ನಲ್ಲಿ ಸೈನಾ ನೆಹ್ವಾಲ್, ಸ್ಕಾಟ್ಲೆಂಡ್ನ ಆಕ್ರಮಣಕಾರಿ ಆಟಗಾರ್ತಿ ಕಿಟ್ಟಿ ಗಿಲ್ಮೌರ್ರನ್ನು 21-14, 18-21, 21-17ರಲ್ಲಿ ಮಣಿಸಿ ಅಂತಿಮ ಹಂತ ಪ್ರವೇಶಿಸಿದ್ದಾರೆ.