ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸತತ 9 ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಮ್ಯಾರಥಾನ್ ಮಜ್ಜನಕ್ಕೆ  ಜೈನಕಾಶಿಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಮಹಾಮಜ್ಜನದಲ್ಲಿ ಬಾಹುಬಲಿ ಮೂರ್ತಿಗೆ ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳು, ಪವಿತ್ರ ಪೂಜಾ  ಸಾಮಗ್ರಿಗಳಿಂದ ಮಜ್ಜನ ನಡೆಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ 3.30ರವರೆಗೂ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಲಾಗುತ್ತಿದ್ದು, 3.30ರಿಂದ 5.30ರವರೆಗೂ ಅಮೃತಾಭಿಷೇಕ ಮಾಡಲಾಗುತ್ತದೆ ಎಂದು ಜೈನ  ಮುನಿಗಳು ತಿಳಿಸಿದ್ದಾರೆ.

ಬಳಿಕ ಕೆಲ ಪೂಜಾ ಕೈಂಕರ್ಯಗಳಿದ್ದು, ಬಳಿಕ ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳಿಂಗ ಮಜ್ಜನ ಮಾಡಿಸಲಾಗುತ್ತದೆ. ಇನ್ನು ಈ ಮಹಾ ಮಜ್ಜನ ಸತತ 9 ಗಂಟೆಗಳ  ಕಾಲ ನಡೆಯಲಿದ್ದು, ಇದಕ್ಕಾಗಿ ಶ್ರವಣಬೆಳಗೊಳದ ವಿಂದ್ಯಗಿರಿಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಇಂದು ಮುಂಜಾನೆ 5 ಗಂಟೆಯಿಂದಲೇ ವಿಂದ್ಯಗಿರಿಯಲ್ಲಿ ಮಹಾಮಜ್ಜನ ಕೈಂಕರ್ಯ ಆರಂಭವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ