ಕೌಲಾಲಂಪೂರ್, ಏ.10-ಮಲೇಷ್ಯಾದಲ್ಲಿ ಮೇ 9ರಂದು ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಹಗರಣಗಳ ಸುಳಿಗೆ ಸಿಲುಕಿರುವ ಪ್ರಧಾನಮಂತರಿ ನಜೀಬ್ ರಜಾಜ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ.
ಈ ಬಾರಿ ಹಿರಿಯ ನಾಯಕ ಮಹತೀರ್ ಮೊಹಮದ್ ನೇತೃತ್ವದ ಬಣವು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಮೇ. 9ರಂದು ಮತದಾನ ನಡೆಯಲಿದೆ. 11 ದಿನಗಳ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಅಧ್ಯಕ್ಷ ಮಹಮದ್ ಹಶೀಮ್ ಅಬ್ದುಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.