ದುಬೈ, ಏ.11-ಭಾರೀ ವಂಚನೆ ಹಗರಣ ಸಂಬಂಧ ಗೋವಾ ಮೂಲದ ಸಿಡ್ನಿ ಲೆಮೋಸ್ ಮತ್ತು ಆತನ ಹಿರಿಯ ಲೆಕ್ಕ ತಜ್ಞ ರಯಾನ್ ಡಿಸೋಜಾ ಎಂಬುವರಿಗೆ ದುಬೈನ ನ್ಯಾಯಾಲಯವೊಂದು 500 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
200 ದಶಲಕ್ಷ ಡಾಲರ್ಗಳ ವಂಚನೆ ಪ್ರಕರಣದಲ್ಲಿ ಇವರು ಶಾಮೀಲಾಗಿದ್ದಾರೆ. ಆರೋಪಿ ಸಿಡ್ನಿ ಖ್ಯಾತ ಆಟಗಾರರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಅವರೊಂದಿಗೆ ತೆಗೆಸಿಕೊಂಡಿರುವ ಫೆÇೀಟೋಗಳು ಸಾಮಾಜಿಕ ಜಾಣತಾಣಗಳಲ್ಲಿವೆ.
ಇವರಿಬ್ಬರು ಹಣಕಾಸು ವಂಚನೆ ಜಾಲದಲ್ಲಿ ಲಕ್ಷಾಂತರ ಮಂದಿಗೆ ಮೋಸ ಮಾಡಿದ್ದರು ಎಂದು ಆಪಾದಿಸಲಾಗಿದೆ.