ಅಲ್ಜೇರಿಯಾದಲ್ಲಿ ಸೇನಾ ವಿಮಾನ ದುರಂತ 257 ಮಿಲಿಟರಿ ಸಿಬ್ಬಂದಿಗಳ ಸಾವು

ಅಲ್ಜೀರ್ಸ್: ಸೇನಾ ಸಿಬ್ಬಂಧಿಯಿದ್ದ ಮಿಲಿಟರಿ ವಿಮಾನ ಅಲ್ಜೇರಿಯಾದ ರಾಜಧಾನಿ ಅಲ್ಜೀರ್ಸ್‍ನ ಹೊರವಲಯದ ಸೇನಾನೆಲೆಯಲ್ಲಿ
ಆಪಘಾತಕ್ಕೀಡಾಯಿತು. ಅಲ್ಜೀರ್ಸ್‍ನಿಂದ 20 ಕಿಮೀ ದೂರದಲ್ಲಿರುವ ಬೌಫರಿಕ್ ವಿಮಾನ ನಿಲ್ದಾನದ ಹೊರಗೆ ಭೂಮಿಗೆ ಅಪ್ಪಳಿಸಿತು.
ಈ ದುರಂತದಲ್ಲಿ 257 ಮಿಲಿಟರಿ ಸಿಬ್ಬಂದಿಗಳು ಸಾವನ್ನಪ್ಪಿದರು.

ಘಟನೆ ನೆಡೆದ ಸ್ಥಳದಲ್ಲಿ ದಟ್ಟವಾದ ಹೊಗೆ ಮತ್ತು ಬೆಂಕಿಯಿಂದ ಆವರಿಸಿಕೊಂಡಿತ್ತು, ಘಟನೆಗೆ ನಿಕರವಾದ ಕಾರಣ ಗೊತ್ತಾಗಿಲ್ಲ ಎಂದ
ರಕ್ಷಣಾ ಸಚಿವಾಲಯ ತನಿಖೆಗೆ ಆದೇಶ ನೀಡಿದೆ. ರಕ್ಷಣಾ ಸಚಿವಾಲಯ ಮೃತರ ಕುಟುಂಭಸ್ಥರಿಗೆ ಸಾಂತ್ವಾನ ವ್ಯಕ್ತಪಡಿಸಿದೆ. ಘಟನೆ
ನೆಡೆದ ಸ್ಥಳದಲ್ಲಿ 14 ಆಂಬ್ಯುಲೆನ್ಸ್ ಮತ್ತು 10 ಆಗ್ನಿಶಾಮಕ ವಾಹನಗಳು ಮೃತ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ
ನಿರತವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ