ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತನ್ನ ವಾಂಟೆಡ್ ಲಿಸ್ಟ್‍ನಲ್ಲಿ ಪಾಕಿಸ್ತಾನದ ರಾಜತಾಂತ್ರಿಕ:

ನವದೆಹಲಿ, ಏ.9-ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತನ್ನ ವಾಂಟೆಡ್ ಲಿಸ್ಟ್‍ನಲ್ಲಿ ಪಾಕಿಸ್ತಾನದ ರಾಜತಾಂತ್ರಿಕನೊಬ್ಬನ ಹೆಸರನ್ನು ಉಲ್ಲೇಖಿಸಿದ್ದು, ಮಾಹಿತಿ ಕೋರಿ ಆತನ ಫೆÇೀಟೋವನ್ನು ಸಹ ಬಿಡುಗಡೆ ಮಾಡಿದೆ. ಈತನೊಂದಿಗೆ ಪಾಕ್‍ನ ಇನ್ನಿಬ್ಬರು ಅಧಿಕಾರಿಗಳ ಹೆಸರುಗಳು ಮತ್ತು ಫೆÇೀಟೋಗಳನ್ನು ಸಹ ಪ್ರಕಟಿಸಲಾಗಿದೆ.  ಶ್ರೀಲಂಕಾದ ಕೊಲೊಂಬೋದ ಪಾಕಿಸ್ತಾನ ಹೈ ಕಮೀಷನ್‍ನಲ್ಲಿ ವೀಶಾ ಕೌನ್ಸೆಲರ್ ಆಗಿ ನಿಯೋಜನೆಗೊಂಡಿದ್ದ ಅಮಿರ್ ಜುಬೈರ್ ಸಿದ್ದಿಖಿ, ಭಾರತದಲ್ಲಿನ ಅಮೆರಿಕ ಮತ್ತು ಇಸ್ರೇಲ್ ಕಾನ್ಸುಲೇಟ್ ಕಚೇರಿಗಳು ಹಾಗೂ ಸೇನೆ ಮತ್ತು ನೌಕಾ ನೆಲೆಗಳ ಮೇಲೆ 26/11ರ ಶೈಲಿಯ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ. ಪಾಕಿಸ್ತಾನದ ಇನ್ನಿಬ್ಬರು ಅಧಿಕಾರಿಗಳು ಈ ಕುತಂತ್ರ ಯೋಜನೆಗೆ ಸಾಥ್ ನೀಡಿದ್ದರು.  ಎನ್‍ಐಎ, ಸಿದ್ದಿಖಿ ಮತ್ತು ಇನ್ನಿಬ್ಬರು ಪಾಕ್ ಅಧಿಕಾರಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್‍ಗಳನ್ನು ಕೋರಿ ಇಂಟರ್‍ಪೆÇಲ್(ಅಂತಾರಾಷ್ಟ್ರೀಯ ಪೆÇಲೀಸರು)ಗೆ ಮಾಹಿತಿ ರವಾನಿಸಲು ಸಿದ್ಧತೆ ನಡೆಸಿದೆ.
ಶ್ರೀಲಂಕಾ ಹೈ ಕಮೀಷನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬ ಪಾಕ್ ಅಧಿಕಾರಿಯೂ ಈ ಯೋಜನೆಯಲ್ಲಿ ಶಾಮೀಲಾಗಿದ್ದು, ಇವರೆಲ್ಲರ ವಿರುದ್ಧ ಕ್ರಮಕ್ಕೆ ಎನ್‍ಐಎ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ