ಅಮರಾವತಿ/ದೆಹಲಿ, ಏ.9- ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರಧಾನಮಂತ್ರಿ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಟಿಡಿಪಿ ಸಂಸದರ ಬಂಧನಕ್ಕೆ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಖಂಡನೆ ವ್ಯಕ್ತಪಡಿಸಿದ್ದಾರೆ.
ಟಿ ಡಿಪಿ ಸಂಸದರ ಬಂಧನವು ಕೇಂದ್ರ ಸರ್ಕಾರದ ದಮನಕಾರಿ ನೀತಿಯ ಪರಮಾವಧಿ ಎಂದು ನಾಯ್ಡು ಕಿಡಿಕಾರಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಸಂಸತ್ ಕಲಾಪಕ್ಕೆ ಸತತ 23 ದಿನಗಳ ಕಾಲ ಅಡ್ಡಿಪಡಿಸಿದ್ದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸದರು ತಮ್ಮ ಬೇಡಿಕೆಗಾಗಿ ಹೋರಾಟ ಮುಂದುವರಿಸಿದ್ದಾರೆ.
ರಾಜಧಾನಿ ನವದೆಹಲಿಯ ನಂ.7, ಲೋಕ ಕಲ್ಯಾಣ ಮಾರ್ಗ್‍ನಲ್ಲಿರುವ ಪ್ರಧಾನಿ ನರೇಂಧ್ರ ಮೋದಿ ನಿವಾಸ ಮುಂದೆ ಪ್ರತಿಭಟನೆ ನಡೆಸಲು ಸದಸ್ಯರು ಮುಂದಾದಾಗ ನಿನ್ನೆ ಪೆÇಲೀಸರು ಮತ್ತು ಸಿಆರ್‍ಪಿಎಫ್ ಸಿಬ್ಬಂದಿ ತೆಲುಗು ದೇಶಂ ಸಂಸದರನ್ನು ಬಂಧಿಸಿದ್ದರು.