ನವದೆಹಲಿ, ಏ.8-ಪತ್ನಿಗೆ ಕಿರುಕುಳ ಮತ್ತು ಕಿರುಕುಳ ನೀಡುವ ಪತಿಗೆ ಸ್ಪಷ್ಟ ಸಂದೇಶ ನೀಡಿರುವ ಸುಪ್ರೀಂಕೋರ್ಟ್, ಹೆಂಡತಿ ಜಡವಸ್ತು ಅಥವಾ ವಸ್ತು ಅಲ್ಲ. ತನ್ನೊಂದಿಗೆ ಇರುವಂತೆ ಆಕೆಗೆ ಗಂಡನು ಬಲವಂತ ಮಾಡುವಂತಿಲ್ಲ ಎಂದು ತಿಳಿಸಿದೆ.
ಕ್ರೂರತನದಿಂದ ಕಿರುಕುಳ ನೀಡುತ್ತಾ, ಆಕೆಯನ್ನು ತನ್ನೊಂದಿಗೆ ಇರಿಸಿಕೊಳ್ಳಲು ಪತಿಯೂ ಬಯಸಿದರೂ, ಇಂಥ ಸನ್ನಿವೇಶಗಳಲ್ಲಿ ತನ್ನೊಂದಿಗೆ ಇರುವಂತೆ ಪತ್ನಿಗೆ ಆತ ಬಲವಂತಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಮಿಶ್ರ ಅವರನ್ನು ಒಳಗೊಂಡ ಪೀಠವು ಈ ವಿಷಯವನ್ನು ಸ್ಪಷ್ಟಪಡಿಸಿತು.
ಮಹಿಳೆಯೊಬ್ಬರು ತನ್ನ ಗಂಡನ ಕ್ರೂರ ಕಿರುಕುಳ ಬಗ್ಗೆ ದಾಖಲಿಸಿ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ವೇಳೆ ಆರೋಪಿ ಪತಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ಆಕೆ ಜಡವಸ್ತುವಲ್ಲ, ನೀನು ಆಕೆಗೆ ಬಲವಂತ ಮಾಡಲಾಗದು. ನಿನ್ನ ಜೊತೆ ವಾಸಿಸಲು ಆಕೆಗೆ ಇಷ್ಟವಿಲ್ಲ. ಇಷ್ಟಾದರು ನೀನು ಆಕೆ ನನ್ನೊಂದಿಗೆ ವಾಸಿಸಲು ಬಲವಂತ ಮಾಡುತ್ತಿರುವೆ, ಇದು ಹೇಗೆ ಸಾಧ್ಯ ಎಂದು ಪೀಠವು ಪ್ರಶ್ನಿಸಿ ನಿನ್ನ ಆಗ್ರಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.