ಗೋಲ್ಡ್ಕೋಸ್ಟ್ , ಏ.8- ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವೀರವನಿತೆ ಮೇರಿಕೋಮ್ ಬಾಕ್ಸಿಂಗ್ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ.
ಇಂದಿಲ್ಲಿ ನಡೆದ 48 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೇರಿಕೋಮ್ ಎದುರಾಳಿ ಸ್ಕಾಟ್ಲೆಂಟ್ನ ಮೆಗಾನ್ ಗೋರ್ಡಾನ್ರ ವಿರುದ್ಧ 5-0ಯಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ದೊರಕಿಸಿಕೊಡುವ ಮುನ್ಸೂಚನೆ ನೀಡಿರುವ ರಾಜ್ಯಸಭಾ ಸದಸ್ಯೆಯೂ ಆಗಿರುವ ಮೇರಿ ಕೋಮ್ ಏಪ್ರಿಲ್ 11 ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಶ್ರೀಲಂಕಾದ ಅನುಷಾ ದಿಲ್ರುಕ್ಸಿಯ ಸವಾಲನ್ನು ಎದುರಿಸಲಿದ್ದಾಳೆ.
ಮೇರಿ ಸಂತಸ:
ಪ್ರಸ್ತುತ ನಡೆಯುತ್ತಿರುವ ಕಾಮನ್ವೆಲ್ತ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿರುವುದು ತುಂಬಾ ಸಂತಸ ನೀಡಿದೆ, ಇದುವರೆಗೂ ನಾನು ಕಾಮನ್ವೆಲ್ತ್ನಲ್ಲಿ ಚಿನ್ನದ ಪದಕ ಗೆದ್ದಿಲ್ಲ ಆ ಕೊರತೆಯನ್ನು ಬಾರಿ ನೀಗಿಸಿಕೊಳ್ಳಲಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ವಾಟರ್ ಫೈನಲ್ಗೆ ವಿಕಾಸ್ ಲಗ್ಗೆ:
ಪುರುಷರ 75 ಕೆಜಿ ವಿಭಾಗದಲ್ಲಿ ಭಾರತದ ವಿಕಾಸ್ ಕೃಷ್ಣ ಅವರು ಕ್ವಾಟರ್ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ವಿಶ್ವ ಚಾಂಪಿಯನ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ವಿಕಾಸ್ ಆಸ್ಟ್ರೇಲಿಯಾದ ಕ್ಯಾಂಪೆಬೆಲ್ ಸೊಮಿರ್ವಿಲ್ಲೆ ಅವರ ವಿರುದ್ಧ ರೋಚಕ ಪಂಚ್ಗಳನ್ನು ಪ್ರದರ್ಶಿಸುವ ಮೂಲಕ ಕ್ವಾಟರ್ಫೈನಲ್ಗೆ ಪ್ರವೇಶಿಸಿದ್ದಾರೆ.