ಭಾರತ-ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ :

ರಾಮೇಶ್ವರಂ, ಏ.8-ಭಾರತ-ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.  ಕಚ್ಚತೀವು ಜಲ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 2,000ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಬೆದರಿಸಿ ಓಡಿಸಿದ್ದಾರೆ ಎಂದು ಮೀನುಗಾರರ ಸಂಘದ ನಾಯಕರೊಬ್ಬರು ಆರೋಪಿಸಿದ್ದಾರೆ.
ಶ್ರೀಲಂಕಾ ನೌಕಾಪಡೆ ಯೋಧರ 20 ದೋಣಿಗಳ ಮೀನುಗಾರಿಕೆ ಬಲೆಗಳನ್ನು ಹರಿದು ಹಾಕಿ, ಬೆಸ್ತರನ್ನು ಬೆನ್ನಟ್ಟಿ ಓಡಿಸಿದ್ದಾರೆ ಎಂದು ರಾಮೇಶ್ವರಂ ಫೀಶರ್‍ಮೆನ್ ಅಸೋಸಿಯೇಷನ್ ಅಧ್ಯಕ್ಷ ಪಿ ಸೆಸುರಾಜ ಆರೋಪಿಸಿದ್ದಾರೆ.  434 ದೋಣಿಗಳಲ್ಲಿ ಬೆಸ್ತರು ಮೀನುಗಾರಿಕೆಯಲ್ಲಿ ತೊಡಗಿದ್ದರು. ಆಗ ಅಲ್ಲಿಗೆ ಬಂದ ಶ್ರೀಲಂಕಾ ಕರಾವಳಿ ರಕ್ಷಣಾಪಡೆ ವಿನಾಕಾರಣ ಅಡ್ಡಿಪಡಿಸಿತು. ಮೀನುಗಾರರನ್ನು ಬೆದರಿಸಿ ಓಡಿಸಿರುವುದರಿಂದ ಮೀನುಗಾರಿಕೆ ನಡೆಸದೇ 2,000ಕ್ಕೂ ಹೆಚ್ಚು ಬೆಸ್ತರು ಬರಿಗೈನಲ್ಲಿ ಹಿಂದಿರುಗಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಪ್ರದೇಶದಲ್ಲಿ ಪದೇ ಪದೇ ಬೆಸ್ತರು ಮತ್ತು ನೌಕಾಪಡೆ ಸಿಬ್ಬಂದಿ ನಡುವೆ ಘರ್ಷಣೆ ನಡೆಯುತ್ತಲೇ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ