ಚೆನ್ನೈ,ಏ.7- ಇನ್ನೋವಾ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕರ್ನಾಟಕ ಮೂಲದ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಸಾವನ್ನಪ್ಪಿರುವ ಘಟನೆ ವಿರುದನಗರ ಜಿಲ್ಲೆಯ ರಾಜ್ಂಪಾಳ್ಯ ಬಳಿ ನಡೆದಿದೆ. ಲಕ್ಷ್ಮೀ ನಾರಾಯಣ, ರತ್ನ, ಕಲಾವತಿ, ಶಂಕರೇಗೌಡ, ಶ್ರೀಧರ, ಕೀರ್ತಿಕಾ, ಮಗು ಪ್ರವೀಣ್ ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಕೇರಳ ಪ್ರವಾಸಕ್ಕೆತೆರಳಿ ವಾಪಸ್ಸಾಗುತ್ತಿದ್ದಾಗ ತಮಿಳುನಾಡು ಸಮೀಪ ಕಾರು ಮತ್ತು ಲಾರಿ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿತ್ತೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಪಟ್ಟಿದ್ದು, ಮೃತದೇಹಗಳು ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.