ಪಣಜಿ, ಏ.7-ತನ್ನ 11 ತಿಂಗಳ ಮಗುವನ್ನು ಎರಡು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಸೇರಿ ನಾಲ್ವರನ್ನು ಗೋವಾ ಪೆÇಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿ ಶೈಲಾ ಪಾಟೀಲ್(32), ಖರೀದಿದಾರ ಅಮರ್ ಮೊರ್ಜೆ(32), ಶೈಲಾ ಸ್ನೇಹಿತರಾದ ಯೋಗೇಶ್ ಗೋಸ್ವಾಮಿ(42) ಹಾಗೂ ಅನಂತ್ ದಮಾಜಿ(34) ಬಂಧಿತ ಆರೋಪಿಗಳು. ಮಗುವನ್ನು ಮಾರಾಟ ಮಾಡಲಾಗಿದೆ ಎಂದು ತಂದೆ ನೀಡಿದ ದೂರಿನ ಮೇರೆಗೆ ಈ ನಾಲ್ವರನ್ನು ಬಂಧಿಸಲಾಗಿದೆ. ಹಣದ ಅಗತ್ಯಕ್ಕಾಗಿ ಗಂಡನಿಗೆ ತಿಳಿಯದೇ ಈಕೆ ಮಗು ಮಾರಾಟ ಮಾಡಿದ್ದಳು. ಇದನ್ನು ಖರೀದಿಸಲು ಅಮರ್ ಜೊತೆ ಯೋಗೇಶ್ ಮತ್ತು ಅನಂತ್ ವ್ಯವಹಾರ ಕುದುರಿಸಿದ್ದರು.