ಸಿಎಂ ಖುರ್ಚಿ ಖಾಲಿ ಇಲ್ಲ: ಸಚಿವ ಹೆಬ್ಬಾರ

ಕಾರವಾರ: ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅವರೇ ಇನ್ನೂ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯಾವುದೇ ಬದಲಾವಣೆಯಿಲ್ಲ. ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಶ್ಷಿಮ ಪದವೀಧರರ ಅಭ್ಯರ್ಥಿ ಪರವಾಗಿ ಮತಯಾಚನೆಗೆ ಕಾರವಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಯತ್ನಾಳ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್, ಅದು ಶಾಸಕ ಯತ್ನಾಳರ ವಯಕ್ತಿಕ ಹೇಳಿಕೆ ಆಗಿದೆ. ಅದರ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಯಡಿಯೂರಪ್ಪನವರೆ ನಮ್ಮ ನಾಯಕರು. ಅವರೇ ಇನ್ನೂ ಮುಂದಿನ ಮೂರು ವರ್ಷದವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.
ತಾನು ಜಿಲ್ಲಾ ಸಂಚಾರದಲ್ಲಿರುವುದು ಪಶ್ಷಿಮ ಪದವೀಧರ ಚುನವಣಾ ಅಭ್ಯರ್ಥಿ ಪ್ರೊ.ಸಂಕನೂರು ಅವರ ಪ್ರಚಾರಕ್ಕಾಗಿ. ಈ ಬಾರಿ ಅವರು ಜಯಗಳಿಸುತ್ತಾರೆ. ಎಲ್ಲ ಪದವೀಧರರು ಅವರ ಕಡೆ ಒಲವು ತೋರಿಸಿದ್ದಾರೆ. ಈಗಾಗಲೇ ನಮ್ಮ ಪಕ್ಷದ ವತಿಯಿಂದ ಈ ಚುನಾವನೆಯಲ್ಲಿ ಹೆಚ್ಚಿನ ಮತದಾನವಾಗುವಂತೆ ನಾವು ಸಭೆಯನ್ನು ನಡೆಸಿದ್ದೇವೆ. ಮತದಾರರನ್ನು ಭೇಟಿ ಮಾಡಿದ್ದೇವೆ. ಮನವೊಲಿಸಿದ್ದೇವೆ ಎಂದು ಹೇಳಿದರು.
ಇನ್ನು ಶಿರಾ ಕ್ಷೇತ್ರ ಮತ್ತು ಆರ್.ಆರ್.ನಗರ ಉಪಚುನವಾಣೆಯಲ್ಲಿಯೂ ಕೂಡ ಕಣಕ್ಕಿಳಿದ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಈಗಾಗಲೇ ನಾವು ಹೊಂದಿದ್ದೇವೆ. ಯಾರೇ ಎನೇ ಹೇಳಿದರೂ ಎಲ್ಲೆಡೆ ಬಿಜೆಪಿ ಗೆಲ್ಲುವ ಕುದುರೆಯಾಗಿದೆ. ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾ ಚುನಾವಣೆ ನಡೆಯಲಿದೆ ಜಿಲ್ಲೆಯು ಸೇರಿದಂತೆ ಹೆಚ್ಚಿನ ತಾಲೂಕುಗಳಲ್ಲಿ ಬಿಜೆಪಿ ಯೇ ಅಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೆಬ್ಬಾರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ