ಮೈಸೂರು: ಕೊರೋನಾ ವೈರಸ್ ಹಾವಳಿಯಿಂದ ಕಂಗಲಾಗಿರುವ ಜನರಿಗೆ ಕೊಂಚ ನಿರಾಳ. ಮೈಸೂರಿನಲ್ಲಿ ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾದರೆ, ಮತ್ತೊಂದೆಡೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಕೂಡಾ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಏಳು ಮಂದಿಯನ್ನು ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇವರಲ್ಲಿ 6 ಜನರು ಮೈಸೂರಿನ ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ ಕಾರ್ಮಿಕರಾದರೆ, ಮತ್ತೊಬ್ಬ ವಿದೇಶದಿಂದ ಬಂದವ.