ರಾಮನಗರ, ಏ.6- ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಟನಲ್ ಮಾಡುವ ಮೂಲಕ ರೋಗವನ್ನು ತಾತ್ಕಾಲಿಕವಾಗಿ ತಡಿಯುವುದನ್ನು ಶುರು ಮಾಡಿದ್ದು, ಇದೇ ರೀತಿ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ ಚನ್ನಪಟ್ಟಣ, ರಾಮನಗರ ಎರಡು ಕಡೆ ಐದು ಸ್ಥಳದಲ್ಲಿ ಟನಲ್ಗಳನ್ನು ರೈತರ ಉಪಯೋಗಕ್ಕಾಗಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕರೋನಾ ನಿಯಂತ್ರಣಕ್ಕೆ ರಾಮನಗರದಲ್ಲಿ ಟನಲ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಹಳ್ಳಿಯಿಂದ ಬರುವ ರೈತರಿಗೆ ಸೋಂಕು ತಡೆಯುವ ಸಣ್ಣ ಕಾರ್ಯವನ್ನು ಪ್ರಾರಂಭ ಮಾಡಿದ್ದೇವೆ ಎಂದರು.
ಎಲ್ಲಾ ಕಡೆ ಈ ರೀತಿ ಟನಲ್ಗಳನ್ನ್ನು ಸ್ಥಾಪನೆ ಮಾಡಬೇಕು. ಸರ್ಕಾರವನ್ನು ಟೀಕಿಸುವ ಸಮಯ ಇದಲ್ಲ. ಸರ್ಕಾರ ಸರಿಯಾದ ರೀತಿ ಕೆಲಸ ಮಾಡಬೇಕು ಎಂದು ಸಲಹೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೇವೆ ಮಾಡುತ್ತಿರುವ ವೈದ್ಯಕೀಯ ಇಲಾಖೆಯವರಿಗೆ ಅಗತ್ಯ ವಸ್ತುಗಳನ್ನು ಕೊಡಲು ಸರ್ಕಾರಕ್ಕೆ ತಿಳಿಸಿವುದಾಗಿ ಇದೇ ವೇಳೆ ಕುಮಾರಸ್ವಾಮಿ ಹೇಳಿದ್ದಾರೆ.
ಪಿಪಿಇ ಸೆಟ್ ಹಾಗೂ ಕಿಟ್ಗಳನ್ನ ತಕ್ಷಣ ತರುವ ವ್ಯವಸ್ಥೆಯಾಗಬೇಕು ಅವರು ತಿಳಿಸಿದ್ದಾರೆ.