ಧರಣಿನಿರತರಿಗೆ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ರಾಹುಲ್ ಗಾಂಧಿ ಕರೆ

ನವದೆಹಲಿ,ಡಿ.16- ಪೌರತ್ವ ಮಸೂದೆ ಮತ್ತು ಎನ್‍ಆರ್‍ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಧರಣಿನಿರತರಿಗೆ ಅಹಿಂಸಾತ್ಮಕ ಸತ್ಯಾಗ್ರಹವನ್ನು ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಸಿಎಬಿ ಮತ್ತು ಎನ್‍ಆರ್‍ಸಿ ಭಾರತದ ಮೇಲೆ ಫ್ಯಾಸಿಸ್ಟರು ಬಿಚ್ಚಿಟ್ಟಿರುವ ಸಾಮೂಹಿಕ ಧ್ರುವೀಕರಣದ ಶಸ್ತ್ರಾಸ್ತ್ರಗಳಾಗಿವೆ. ಇದರ ವಿರುದ್ಧ ಶಾಂತಿಯುತ, ಅಹಿಂಸಾತ್ಮಕ ಸತ್ಯಾಗ್ರಹ ನಡೆಸುವುದೊಂದೇ ದಾರಿ ಎಂದು ಅವರು ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

ಸಿಎಬಿ ಮತ್ತು ಎನ್‍ಆರ್‍ಸಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಅಹಿಂಸಾತ್ಮಕ ಪ್ರತಿಭಟನೆಗೆ ನಾನು ಕೂಡ ಬೆಂಬಲಿಸುವುದಾಗಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ವಿದ್ಯಾರ್ಥಿ ಚಳವಳಿಯನ್ನು ಸ್ವಾಗತಿಸಿ ತಾವು ಕೂಡ ನಿಮ್ಮ ಬೆಂಬಲಕ್ಕಿರುವುದಾಗಿ ತಿಳಿಸಿದ್ದಾರೆ.

ಶಹೀನ್ ಬಾಗ್, ಆಶ್ರಮ ಚೌಕ್, ನ್ಯೂ ಫ್ರೆಂಡ್ಸ್ ಕಾಲೋನಿ, ಆಶ್ರಮ ಚೌಕ್ ಸೇರಿದಂತೆ ದಕ್ಷಿಣ ದೆಹಲಿಯ ಬಹುತೇಕ ಕಡೆ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪೋಲೀಸರು ಜಾಮಿಯಾ ಮಿಲಿ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ