ಕೇಂದ್ರ ಸರ್ಕಾರ ಶೀಘ್ರವೇ 2000 ರೂ. ನೋಟು ಅಮಾನ್ಯೀಕರಣ ಮಾಡಲಿದೆ ಎಂದು ಊಹೆಗಳಿದ್ದ ಬೆನ್ನಲ್ಲೇ, ಇದು ಕೇವಲ ವದ್ದಂತಿಯಾಗಿದ್ದು,ಯಾರು ಚಿಂತೆಗೆ ಒಳಗಾಗಬೇಕಿಲ್ಲ ಎಂದು ಹಣಕಾಸು ಸಚಿವಾಲಯದ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
2000 ರೂ. ನೋಟಿನಿಂದ ಕಪ್ಪು ಹಣ ಹೆಚ್ಚಾಗಿದ್ದು, 2000 ರೂ. ನೋಟಿನ ಬದಲಿಗೆ ಮತ್ತೊಮ್ಮೆ ಕೇಂದ್ರ ಸರ್ಕಾರ 1000 ರೂ.ನೋಟು ಜಾರಿಗೆ ತರಲಿದೆ ಎಂಬ ಊಹೆಗಳು ಜನರಲ್ಲಿ ಮೂಡಿವೆ ಎಂದು ಎಸ್ಪಿ ಸಂಸದ ವಿಶಾಂಬರ್ ಪ್ರಸಾದ್ ನಿಶಾದ್ ಎಂದು ಲೋಕಸಭೆಯಲ್ಲಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಠಾಕೂರ್, ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ತಿಳಿಸಿದ್ದಾರೆ.