
ಚೆನ್ನೈ, ಏ.4-ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಎಐಎಡಿಎಂಕೆ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ನಿನ್ನೆ ನಿರಶನದ ವೇಳೆ ಸೇಲಂ, ವೆಲ್ಲೂರು, ಕೊಯಂಮತ್ತೂರು ಜಿಲ್ಲೆಗಳಲ್ಲಿ ಕಾರ್ಯಕರ್ತರು ಹೊಟ್ಟೆ ಬಿರಿಯುವಂತೆ ಬಿರಿಯಾನಿ ತಿಂದಿರುವ ಫೆÇೀಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದ್ದು, ನಗಪಾಟಲಿಗೀಡಾಗಿದ್ದಾರೆ.
ನಿನ್ನೆ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿ ಎಐಎಡಿಎಂಕೆ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು ನಿರಶನ ನಡೆಸಿದ್ದರು. ಇದೇ ವೇಳೆ ಕೆಲವರು ಪೆಂಡಾಲ್‍ನ ಹಿಂದೆ ಹೋಗಿ ಬಿರಿಯಾನಿ ಸೇವಿಸಿ ಮತ್ತೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಈ ದೃಶ್ಯಗಳನ್ನು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉಪವಾಸ ಸತ್ಯಾಗ್ರಹ ಆಚರಿಸುವುದೆಂದರೆ ಹೀಗೆಯೇ ಎಂಬ ವ್ಯಂಗ್ಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಿನ್ನೆ ಕೆಲವೆಡೆ ನಡೆದ ಉಪವಾಸ ಸತ್ಯಾಗ್ರಹದ ನಂತರ ಕಾರ್ಯಕರ್ತರಿಗೆ ಮದ್ಯ ಪೂರೈಸಿದ ಬಗ್ಗೆಯೂ ಸುದ್ದಿ ಇದೆ.