ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಕೊಲೆ: ಹೆದರಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Execution Sling Hanging Hangman Knot Penalty Rope

ಟಿ.ನರಸೀಪುರ, ಏ.3- ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಕೊಲೆ ಮಾಡಿರುವ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಹೆದರಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದರಾಜು (40) ಕೊಲೆಯಾದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ಮಹದೇವ ಆಲಿಯಾಸ್ ಬೊಮ್ಮ(40) ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ.
ಘಟನೆ ವಿವರ: ಹೊರಳಹಳ್ಳಿ ಗ್ರಾಮದ ಸಿದ್ದರಾಜು ಪತ್ನಿ ಜೊತೆ ಆದೇ ಗ್ರಾಮದ ಮಹದೇವ ಕಳೆದ 3-4 ವರ್ಷಗಳಿಂದ ಸಲುಗೆಯಿಂದ ಇದ್ದನು ಎನ್ನಲಾಗಿದೆ.
ಇವರಿಬ್ಬರ ಸಂಬಂಧ ಕುರಿತು ಇತ್ತೀಚಿಗೆ ಸಿದ್ದರಾಜು ತಿಳಿದುಆಗಾಗ ಜಗಳ ಮಾಡುತ್ತಿದ್ದನೆನ್ನಲಾಗಿದೆ.
ಸಿದ್ದರಾಜುವಿನ ನಡವಳಿಕೆಯಿಂದ ಬೇಸರಗೊಂಡ ಮಹದೇವ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ತಿಳಿದು ತನ್ನ ಸ್ನೇಹಿತ ಸಿದ್ದಪ್ಪಾಜಿ(28) ಎಂಬಾತನೊಂದಿಗೆ ಕಳೆದ ಮಾ.31ರಂದು ಸಂಜೆ ಸಿದ್ದರಾಜು ಮನೆಗೆ ತೆರಳಿ ಉಪಾಯದಿಂದ ಸಿದ್ದರಾಜುವನ್ನು ಕುಡಿಯಲು ಕರೆದೊಯ್ದಿದ್ದು. ಗ್ರಾಮದ ನಿರ್ಜನ ಪ್ರದೇಶದಲ್ಲಿ ಕಂಠಪೂರ್ತಿ ಮದ್ಯ ಕುಡಿಸಿ ಸಿದ್ದರಾಜುವನ್ನು ಇಬ್ಬರು ಸೇರಿ ಕತ್ತುಹಿಸುಕಿ ಕೊಲೆ ಮಾಡಿ ನಂತರ ಗ್ರಾಮದ ಕಾಲುವೆ ತೂಬಿಗೆ ತುರುಕಿ ಗ್ರಾಮಕ್ಕೆ ವಾಪಸ್ ಆಗಿದ್ದರು.
ಇತ್ತ ತನ್ನ ಗಂಡ ಮನೆಗೆ ಬಾರದ ಕಾರಣ ಸಂಶಯಗೊಂಡ ಮಂಜುಳಾ ಲ್ಲಾ ಕಡೆ ಹುಡುಕಾಟ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ.  ಇತ್ತ ತನ್ನ ಗಂಡನನ್ನು ಕರೆದೊಯ್ದಿದ್ದ ಮಹದೇವ ಹಾಗೂ ಸಿದ್ದಪ್ಪಾಜಿಯನ್ನು ಅನುಮಾನಗೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.  ತಾನು ಮಾಡಿರುವ ಕೊಲೆ ಗ್ರಾಮಸ್ಥರಿಗೆ ತಿಳಿದ ಕೂಡಲೇ ಭಯಗೊಂಡ ಮಹದೇವ ಏಕಾಏಕಿ ಮನೆಗೆ ತೆರಳಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈತನಿಗೆ ಕೊಲೆ ಮಾಡಲು ಸಹಕರಿಸಿದ ಸಿದ್ದಪ್ಪಾಜಿ ಪೆÇೀಲಿಸರಿಗೆ ಶರಣಾಗಿದ್ದು, ಆಕ್ರಮ ಸಂಬಂಧ ಹೊಂದಿದ್ದ ಮಂಜುಳಾಳನ್ನು ಕೂಡ ಪೆÇೀಲಿಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ತಿ.ನರಸೀಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್‍ಪಿ ಅಮಿತ್‍ಸಿಂಗ್, ನಂಜನಗೂಡು ಉಪ ವಿಭಾಗದ ಡಿವೈಎಸ್‍ಪಿ ನವೀನ್‍ಕುಮಾರ್, ವೃತ್ತ ನಿರೀಕ್ಷಕ ಕೆ.ಚಂದ್ರಶೇಖರ್, ಕ್ರೈಂ ಸಬ್‍ಇನ್ಸ್‍ಪೆಕ್ಟರ್ ಸುರೇಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ