ಬೆಂಗಳೂರು: ಉಪಚುನಾವಣೆ ರಂಗೇರಿದ್ದು ಘಟಾನುಘಟಿಗಳಿಂದ ನಾಮಪತ್ರಿಕೆಸಲ್ಲಿಕೆಯಾಗಿದೆ. ಕೊನೆಯ ದಿನವಾದ ಇಂದು ಅಭ್ಯರ್ಥಿಗಳು ಬೃಹತ್ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್ , ಕಾಂಗ್ರೆಸ್ ನಿಂದ ಎಂ.ಅಂಜಿನಪ್ಪ ಮತ್ತು ಜೆಡಿಎಸ್ ನಿಂದ ಕೆ.ಪಿ. ಬಚ್ಚೆಗೌಡ ನಾಮಪತ್ರ ಸಲ್ಲಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಅಭ್ಯರ್ಥಿ ಅಂಜಿನಪ್ಪ ಪರ ಪ್ರಚಾರ ನಡೆಸಿದ್ದರು.
ಇನ್ನು ಬೆಳಗಾವಿಯ ಗೋಕಾಕ್ ನಲ್ಲಿ ಸಹೋದರರ ಸವಾಲು ಇದೆ. ಬಿಜೆಪಿಯಿಂದ ರಮೇಶ್ ಜಾರಕಿಹೊಳಿ
ಕಾಂಗ್ರೆಸ್ನಿಂದ ಲತನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಲತನ್ ಜಾರಕಿಹೊಳಿಗೆ ಸತೀಶ್ ಜಾತಕಿಹೊಳಿ ಸಾಥ್ ಕೊಟ್ರೆ, ರಮೇಶ್ ಜಾರಕಿಹೊಳಿಗೆ ಬಾಲಚಂದ್ರ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದಾರೆ.
ಹುಣಸೂರಿನಲ್ಲಿ ಬಿಜೆಪಿಯಿಂದ ಎಚ್.ವಿಶ್ವನಾಥ್, ಕಾಂಗ್ರೆಸ್ ನಿಂದ ಎಚ್.ಪಿ .ಮಂಜುನಾಥ್ ಮತ್ತು ಜೆಡಿಎಸ್ ನಿಂದ ಸೋಮಶೇಖರ್ ನಾಮಪತ್ರ ಸಲ್ಲಿಸಿದ್ದಾರೆ.
ಯಶವಂತಪುರದಲ್ಲಿ ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಿಂದ ಪಾಳ್ಯ ನಾಗರಾಜ್ ಮತ್ತು ಜೆಡಿಎಸ್ ನಿಂದ ಜವರಾಯಿ ಗೌಡ ಸ್ಪರ್ಧಿಸುತ್ತಿದ್ದಾರೆ.
ಶಿವಾಜಿನಗರದ ಬಿಜೆಪಿಯಿಂದ ಸರವಣ ಮತ್ತು ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷಾದ್ ಮತ್ತು ಜೆಡಿಎಸ್ ನಿಂದ ತನ್ವೀರ್ ಅಹ್ಮದ್ ಕಣದಲ್ಲಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಲ್.ದೇವರಾಜ್ ಜೆಡಿಎಸ್ ನಿಂದ ಸ್ಪಧಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿಗೆ ಮತ್ತೆ ಬಂದಿರುವ ಆನಂದ್ ಸಿಂಗ್ ನಾಮಪತ್ರ ಸಲ್ಲಿಸಿದರು.
ಶಿವಾಜಿನಗರ ಮತ್ತು ಯಶವಂತಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೋಡ್ ಶೋ ನಡೆಸಿದ್ದರು.