ಹೊಸದಿಸಲ್ಲಿ: ತೀರ್ಪು ಕೊಡುವ ಸಮಯದಲ್ಲಿ ಆಡಿಯೊ ಟೇಪ್ ನ್ನ ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಹೀಗಾಗಿ ಅನರ್ಹ ಶಾಸಕರು ನಿಟ್ಟುಸಿರು ಬಿಡುವಂತಾಗಿದೆ.
ಮಂಗಳವಾರ ಕಾಂಗ್ರೆಸ್ ಪರ ವಾದ ಮುಂದುವರೆಸಿದ ಕಪಿಲ್ ಸಿಬಲ್ ಬಿಎಸ್ ವೈ ಅವರ ಆಡಿಯೊವನ್ನ ಪರಿಗಣಿಸುವಂತೆ ಮನವಿ ಮಾಡಿದರು. ನ್ಯಾಯಮೂರ್ತಿ ರಮಣ ಇದಕ್ಕೆ ಒಪ್ಪಿಗೆ ಕೊಟ್ರು. ಆದರೆ ಆಡಿಯೊವನ್ನ ಪರಿಗಣಿಸಿದ್ದೆ ಆದಲ್ಲಿ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದೆ.ತೀರ್ಪನ್ನ ಕೊಡುವ ಸಮಯದಲ್ಲಿ ಆಡಿಯೊ ಟೇಪ್ ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನೀವು ಗಮನಕ್ಕೆ ತಂದಿದ್ದೀರಿ ನಾವು ಅದನ್ನ ಪರಿಗಣಿಸಿದ್ದೇವೆ ಎಂದು ಹೇಳಿದೆ.
ತೀರ್ಪು ನೀಡುವ ವೇಳೆ ಆಡಿಯೊ ಪ್ರಕರಣವನ್ನ ಪರಿಗಣಿಸುತ್ತಾರೆ ಎಂದು ಕಾಂಗ್ರೆಸ್ ಪರ ವಕೀಲ ಸಂದೀಪ್ ಪಾಟೀಲ್ ಹೇಳಿದ್ದಾರೆ. ಈ ಕಾರಣಕ್ಕಾಗಿ ಸ್ಪೀಕರ್ ಆದೇಶ ಎತ್ತಿ ಹಿಡಿಯುತ್ತಾ ಸುಪ್ರೀಮ್ ಕೋರ್ಟ್? ಅನರ್ಹರಿಗೆ ಉಪ ಚುನಾವಣೆಯಲ್ಲಿ ಅವಕಾಶ ಸಿಗೊದಿಲ್ವಾ ? ಸೆಪ್ಟಂಬರ್ 11ರ ವೇಳೆಗೆ ತೀರ್ಪು ಬರುವ ಸಾಧ್ಯತೆ ತುಂಬ ಇದೆ.