ಮಕ್ಕಳಲ್ಲಿ ಮಧುಮೇಹ ಕಾಯಿಲೆ-ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ-ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು, ನ.೪- ಇತ್ತೀಚೆಗೆ ಮಕ್ಕಳಲ್ಲಿ ಮಧುಮೇಹ ಕಾಯಿಲೆ  ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ನಗರದಲ್ಲಿಂದು ಸಮತ್ವ ಟ್ರಸ್ಟ್- ಜ್ಞಾನ ಸಂಜೀವಿನಿ ಆಸ್ಪತ್ರೆ ಹಮ್ಮಿಕೊಂಡಿದ್ದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಧುಮೇಹ ಬರಿ ರಕ್ತ, ಮೂತ್ರದಲ್ಲಿ ಕಾಣಿಸಿಕೊಂಡು ದೇಹವನ್ನು ನಿಶಕ್ತಿ ಮಾಡುವುದಷ್ಟೆ ಅಲ್ಲದೆ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡಕ್ಕೆ ಹಾನಿ, ಕಣ್ಣಿನ ತೊಂದರೆ, ನರಗಳ ದೌರ್ಬಲ್ಯದಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದರು.

ಒಂದನೇ ಹಂತದ ಮಧುಮೇಹ ಸಾಮಾನ್ಯವಾಗಿ ನಿಯಂತ್ರಣದಲ್ಲಿಡಬಹುದು. ಆದರೆ ಎರಡನೇ ಹಂತದ ಮಧುಮೇಹಕ್ಕೆ ಕಾಲಕಾಲಕ್ಕೆ ತಪಾಸಣೆ ಅಗತ್ಯ.ಮಹಿಳೆಯರು ಸಹ ಮಧುಮೇಹದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ಮಕ್ಕಳು ಚಟುವಟಿಕೆಯಿಂದ ಇರಬೇಕು. ಸತ್ವಭರಿತ, ಪ್ರೋ ಯುಕ್ತ ಆಹಾರ ಸೇವಿಸಬೇಕು ಎಂದ ಅವರು,  ಮಧುಮೇಹ ಪೀಡಿತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಜ್ಞಾನ ಸಂಜೀವಿನಿ ಆಸ್ಪತ್ರೆಯ ಕೆಲಸವನ್ನು ಶ್ಲಾಘಿಸಿದರು.

ಜ್ಞಾನ ಸಂಜೀವಿನಿ ಆಸ್ಪತ್ರೆಯ ಡೀನ್ ಡಾ.ಶ್ರೀಕಂಠ ಮಾತನಾಡಿ, ಜೀವನಶೈಲಿ ಬದಲಿಸಿಕೊಂಡು, ನಿಯಮಿತ ಆಹಾರಪದ್ಧತಿ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಶಿಸ್ತಾಗಿ ಪಾಲಿಸಿದರೆ ದೇಹದಲ್ಲಿನ ಸಕ್ಕರೆ ಅಂಶದ ಪ್ರಮಾಣ, ರಕ್ತದೊತ್ತಡ ಹಾಗೂ ಕೊಲೆಸ್ಟಾçಲ್ ಅಂಶಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಾ.ದಿನಕರನ್, ಡಾ.ಬಿ.ಮಹದೇವ್ ಭಟ್ ಹಾಗೂ ಡಾ.ಕವಿತಾ ಮುನಿರಾಜು ಸೇರಿದಂತೆ ಪ್ರಮುಖರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ