ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಸಭಾ ನಾಯಕರಾಗಿ ಇಂದು ಪುನರಾಯ್ಕೆ:

ನವದೆಹಲಿ, ಏ.3-ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಸಭಾ ನಾಯಕರಾಗಿ ಇಂದು ಪುನರಾಯ್ಕೆಯಾಗಿದ್ದಾರೆ.
ಸಭಾಪತಿ ಡಾ. ಎಂ.ವೆಂಕಯ್ಯನಾಯ್ಡು ಅವರು ಇಂದು ಸಂಸತ್ತಿನ ಮೇಲ್ಮನೆಯಲ್ಲಿ 65 ವರ್ಷದ ಜೇಟ್ಲಿ ಅವರ ಹೆಸರನ್ನು ಸದನದ ನಾಯಕರಾಗಿ ಪ್ರಕಟಿಸಿದರು.
ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಮರು ಆಯ್ಕೆ ಆದ ಅವರು ಈ ಹಿಂದೆ ರಾಜ್ಯಸಭಾ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿ ನಿನ್ನೆ ಮುಗಿದಿತ್ತು.
ಇವರನ್ನು ರಾಜ್ಯಸಭಾ ನಾಯಕರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇಮಕ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರಿಂದ ತಮಗೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಜೇಟ್ಲಿ ಅವರನ್ನು ಮೇಲ್ಮನೆ ನಾಯಕರಾಗಿ ಪುನರಾಯ್ಕೆ ಮಾಡಲಾಗಿದೆ ಎಂದು ವೆಂಕಯ್ಯನಾಯ್ಡು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ