ಶಾಲಾ ಅಂಗಳಕ್ಕೆ ಸಂಚಾರಿ ತಾರಾಲಯ

ಬೆಂಗಳೂರು, ಅ.22- ಶಾಲಾ ಮಕ್ಕಳಲ್ಲಿ ವೈe್ಞÁನಿಕ ಮನೋಭಾವನೆ ಉತ್ತೇಜಿಸಲು, ಸೌರಮಂಡಲದ ಕೌತುಕಗಳ ಕುರಿತು ಅರಿವು ಮೂಡಿಸಲು ಇದೀಗ ಬಂದಿದೆ ಶಾಲಾ ಅಂಗಳಕ್ಕೆ ಸಂಚಾರಿ ತಾರಾಲಯ.ಶಾಲಾ ಆವರಣದಲ್ಲೇ ಕುಳಿತು ಸೌರ ವ್ಯೂಹದ ಬಗ್ಗೆ ಸಮಗ್ರ ಮಾಹಿತಿಯನ್ನು ಮನನ ಮಾಡಿಕೊಳ್ಳುವ ವಿನೂತನ ವಿe್ಞÁನ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಚಾಲನೆ ನೀಡಿದರು.

ಡೈರಿ ಡೇ ಮತ್ತು ಬೆಂಗಳೂರು ಟ್ರಸ್ಟ್ ಸಂಸ್ಥೆಗಳು ಈ ಸಂಚಾರಿ ತಾರಾಲಯವನ್ನು ಅಭಿವೃದ್ಧಿಪಡಿಸಿದ್ದು, ಸರ್ಕಾರಿ ಶಾಲೆಗಳ ಮಕ್ಕಳನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ  ಸಂಚಾರಿ ತಾರಾಲಯವನ್ನು ರಾಜಾಜಿನಗರದ ಪಿವಿಪಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಇದೊಂದು ಅತ್ಯುತ್ತಮ ಯೋಜನೆ. ಇದನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು  ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದರು.

ಗ್ರಹ ಮತ್ತು ನಕ್ಷತ್ರದ ನಡುವೆ ಸಾಕಷ್ಟು ವ್ಯತ್ಯಾಸವಿದೆ.ಗ್ರಹಕ್ಕೆ ಸ್ವಂತಃ ಬೆಳಗುವ ಶಕ್ತಿಯಿಲ್ಲ. ಗ್ರಹ ಪ್ರತಿಬಿಂಬಿಸುತ್ತದೆ.ನಕ್ಷತ್ರ ಬೆಳಗುತ್ತದೆ.ನಮಗಿರುವುದು ಒಂದೇ ಚಂದ್ರ.ಸೂರ್ಯ, ಆದರೆ ಚಂದ್ರ ಮತ್ತು ಸೂರ್ಯಗ್ರಹಣ ನಡೆಯುವ ದಿನ ಇಷ್ಟೇ ಸಮಯದಲ್ಲಿ ಗ್ರಹಣ ಘಟಿಸುತ್ತದೆ ಎಂದು ಖಚಿತವಾಗಿ ಹೇಳುವುದು ನಿಜಕ್ಕೂ ತಮಗೆ ಅಚ್ಚರಿ ತಂದಿದೆ ಎಂದರು.

ಇನ್ನು ಕೆಲವೇ ದಿನಗಳಲ್ಲಿ ನಮ್ಮ ವಿe್ಞÁನಿಗಳು ಮಂಗಳ ಗ್ರಹಕ್ಕೆ ಹೋಗಿ ಇಳಿಯುತ್ತಾರೆ.ಚಂದ್ರಗ್ರಹಣದಲ್ಲಿ ಕೆಲವರು ನಿವೇಶನ ಖರೀದಿಸಲು ಈಗಾಗಲೇ ಮುಂದಾಗಿದ್ದಾರೆ.ಮಂಗಳ ಮತ್ತು ಚಂದ್ರ ಗ್ರಹಣದ ಬಗ್ಗೆ ಸಾಕಷ್ಟು ಅಧ್ಯಯನಗಳು ಭವಿಷ್ಯದಲ್ಲಿ ನಡೆಯುತ್ತವೆ ಎಂದರು.

ವಿದ್ಯಾರ್ಥಿಗಳು ಇನ್ನು ಮುಂದೆ ತಾರಾಲಯ ವೀಕ್ಷಿಸಲು ನೆಹರು ಪ್ಲಾನಿಟೋರಿಯಂಗೆ ಬರುವ ಅವಶ್ಯಕತೆಯಿಲ್ಲ.  ಸ್ಕೈ ಪಾರ್ಕ್ 360 ಡಿಗ್ರಿ ಸಂಚಾರಿ ತಾರಾಲಯ ವನ್ನು ತಮ್ಮ ಶಾಲಾ ಅಂಗಳದಲ್ಲೇ ವೀಕ್ಷಿಸಬಹುದು.ನೋಡಲು ಇದು ಗೊಮ್ಮಟದ ಆಕಾರದಲ್ಲಿದ್ದು, ಒಳಗಡೆ ಕತ್ತಲಿನಲ್ಲಿ ಒಂದೇ ಬಾರಿಗೆ 45 ವಿದ್ಯಾರ್ಥಿಗಳು ತಾರಾಲಯ ವೀಕ್ಷಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು.

ಡೈರಿ ಡೇ ಸಂಸ್ಥಾಪಕರಾದ ಎಂ.ಎನ್.ಜಗನ್ನಾಥ್,  ಯುವ ಬೆಂಗಳೂರು ಟ್ರಸ್ಟ್ ಸ್ಥಾಪಕ ಟ್ರಸ್ಟಿ ಕಿರಣ್ ಸಾಗರ್, ಎ. ಬಾಲರಾಜು ಹಾಜರಿದ್ದರು.

ಈ ಸಂಚಾರಿ ತಾರಾಲಯವನ್ನು ಉಚಿತವಾಗಿ ಸರ್ಕಾರಿ ಶಾಲೆಗಳಿಗೆ ತರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ: 8660821611.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ