ನಾಡಿನ ಸಂಸ್ಕøತಿ, ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ-ಸಚಿವ ಸಿ.ಟಿ.ರವಿ

ಬೆಂಗಳೂರು, ಅ.18- ಸಾಂಸ್ಕøತಿಕ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಒಂದು ತಂಡವಾಗಿ ಕೆಲಸ ಮಾಡೋಣ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ವಿವಿಧ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ ಕರೆ ನೀಡಿದರು.

ವಿಕಾಸಸೌಧದಲ್ಲಿಂದು ವಿವಿಧ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಅವರು, ನಾಡಿನ ಸಂಸ್ಕøತಿ, ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ವೈವಿಧ್ಯಮಯವಾಗಿರುವ ಈ ಸಂಪತ್ತನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ರಾಜ್ಯದಲ್ಲಿ ಬಹಳಷ್ಟು ಸಾಂಸ್ಕøತಿಕ ಲೋಕದ ದಿಗ್ಗಜರಿದ್ದಾರೆ. ಅವರೆಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ ಎಂದರು.

ಹಳೆಬೇರು ಹೊಸ ಚಿರುಗು ಎಂಬಂತೆ ಅನುಭವಿಗಳು- ಅನುಭವ ಇಲ್ಲದವರ ಸಂಗಮವಾಗಿದೆ. ಯಾರಿಗೂ ಅಧಿಕಾರದ ಪಿತ್ತ ನೆತ್ತಿಗೇರುವುದು ಬೇಡ.ಇತಿಮಿತಿಯಲ್ಲಿ ಕೆಲಸ ಮಾಡೋಣ. ತಾವು ಅಕಾಡೆಮಿಗಳ ಸೂರ್ಯ ಅಲ್ಲ. ರಾಡಿಯಲ್ಲೇ ಬೆಳೆದು ಕಮಲ ಕಂಪನ್ನು ಸವಿದಿರಿವೆ. ಅಕಾಡೆಮಿಗಳ ಮೇಲೆ ಕವಿದಿರುವ ಮೋಡಗಳನ್ನು ಸರಿಸಿ ಅವುಗಳು ಮತ್ತಷ್ಟು ಬೆಳಗುವಂತೆ ಮಾಡೋಣ ಎಂದು ಸಲಹೆ ಮಾಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು,  ನಿರ್ದೇಶಕ ಎಸ್.ರಂಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸೇರಿದಂತೆ ವಿವಿಧ ಅಕಾಡೆಮಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ