ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಗುರುವಾರ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್ ನೀಡಿತ್ತು. ಪರಮೇಶ್ವರ್ ಮನೆ ಹಾಗೂ ಅವರಿಗೆ ಸೇರಿದ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಶೋಧ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಳ್ಳದಾ ಕಾರಣ ಇಂದು ಕೂಡ ಐಟಿ ಕಾರ್ಯಾಚರಣೆ ಮುಂದುವರಿಯಲಿದೆ.
ನಿನ್ನೆ ಮುಂಜಾನೆಯೇ ಪರಮೇಶ್ವರ್ ಮೆನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ತಡರಾತ್ರಿ 10 ಗಂಟೆವರೆಗೂ ಶೋಧ ಕಾರ್ಯಾಚರಣೆ ಮುಂದುವರೆದಿತ್ತು. 12.30ರ ವರೆಗೂ ಪರಮೇಶ್ವರ್ ವಿಚಾರಣೆ ನಡೆದಿತ್ತು. ಮೊದಲ ದಿನ ವಿಚಾರಣೆ ನಂತರ ಮಹತ್ವದ ದಾಖಲೆಗಳೊಂದಿಗೆ 10ಕ್ಕೂ ಹೆಚ್ಚು ಅಧಿಕಾರಿಗಳು ತೆರಳಿದ್ದಾರೆ.
ಈಗಾಗಲೇ ಕೆಲ ಮಹತ್ವದ ದಾಖಲೆ ಜೊತೆ 10 ಐಟಿ ಅಧಿಕಾರಿಗಳು ತೆರಳಿದ್ದಾರೆ. ನಾಲ್ಕು ಐಟಿ ಅಧಿಕಾರಿಗಳು ಪರಮೇಶ್ವರ್ ನಿವಾಸದಲ್ಲೇ ಉಳಿದುಕೊಂಡಿದ್ದಾರೆ. ಎರಡನೇ ದಿನವೂ ಐಟಿ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಶಪಡಿಸಿಕೊಂಡಿರುವ ಮಹತ್ವದ ದಾಖಲೆ ಆಧರಿಸಿ ಐಟಿ ಅಧಿಕಾರಿಗಳು ಇಂದು ತನಿಖೆ ನಡೆಸಲಿದ್ದಾರೆ.
ಗುರುವಾರ ಪರಮೇಶ್ವರ್ಗೆ ಸೇರಿದ ಶಿಕ್ಷಣ ಸಂಸ್ಥೆ ಹಾಗೂ ಮನೆ ಮೇಲೆ ಏಕಕಾಲದಲ್ಲಿ ಐಟಿ ದಾಳಿಯಾಗಿತ್ತು. ನೆಲಮಂಗಲದಲ್ಲಿರುವ ಪರಮೇಶ್ವರ್ ಒಡೆತನದ ಮೆಡಿಕಲ್ ಕಾಲೇಜು ಮೇಲೆ, ಸದಾಶಿವನಗರದ ಅವರ ನಿವಾಸದನದ ಮೇಲೆ, ತುಮಕೂರಿನಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ಪದವಿ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.