ಬೆಂಗಳೂರು, ಸೆ.17- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬದ ಮೇಲೆ ಅನರ್ಹ ಶಾಸಕರಾದ ನಾರಾಯಣಗೌಡ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕೈಗಾರಿಕೋದ್ಯಮಿಗಳ ರಾಜ್ಯ ಘಟಕ ಮಾಜಿ ಅಧ್ಯಕ್ಷ ಟಿ.ಆರ್.ಪ್ರಸಾದ್ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ತೊಂದರೆಗೆ ಸಿಲುಕಿಸಿದ್ದು ದೇವೇಗೌಡರು ಎಂದು ನಾರಾಯಣಗೌಡ ಅವರು ಅಪಪ್ರಚಾರ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು, ಇಡಿ, ಸಿಬಿಐ ದೇವೇಗೌಡರ ಕೈಯಲ್ಲಿದೆಯೇ, ಅಧಿಕಾರ ಇಲ್ಲದ ದೇವೇಗೌಡರ ಮೇಲೆ ಈ ರೀತಿ ಅಪಪ್ರಚಾರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾರಾಯಣಗೌಡ ಅವರನ್ನು ಶಾಸಕರನ್ನಾಗಿ ಮಾಡಿದ್ದು ಯಾರು, ಇವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಸಹ ನೈತಿಕತೆ ಇಲ್ಲದೇ ಮಾತನಾಡುತ್ತಿರುವುದು ಸರಿಯಲ್ಲ. ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.