ಮೈಸೂರು ಪಾಕ್ ಮೈಸೂರಿನದ್ದಲ್ಲ, ತಮಿಳುನಾಡಿನದ್ದು!

ನವದೆಹಲಿ: ಮೈಸೂರು ಪಾಕ್ ಎಲ್ಲಿಯದ್ದು? ಇದೆಂಥಾ ಪ್ರಶ್ನೆ ಹೆಸರಲ್ಲೇ ಇದ್ಯಲ್ಲಾ ಯಾರನ್ನು ಕೇಳಿದರೂ ಮೈಸೂರಿನದ್ದೇ ಎಂಬ ಉತ್ತರ ಸಿದ್ಧವಾಗಿರುತ್ತೆ. ಆದರೆ ಈಗ ಮೈಸೂರು ಪಾಕ್ ಮೈಸೂರಿನದ್ದಲ್ಲ ಎಂಬ ವಾದ ಹುಟ್ಟಿಕೊಂಡಿದೆ.

ಹೌದು, ಮೈಸೂರು ಪಾಕ್ ನ ಭೌಗೋಳಿಕ ಗುರುತಿನ(ಜಿಐ– ಜಿಯಾಗ್ರಫಿಕಲ್‌ ಐಡೆಂಟಿಫಿಕೇಷನ್‌) ಮೇಲೆ ತಮಿಳುನಾಡು ಹಕ್ಕು ಪ್ರತಿಪಾದನೆಗೆ ಮುಂದಾಗಿದೆ. ಈ ಸಂಬಂಧ ಸ್ವರಾಜ್ಯದ ಅಂಕಣಕಾರ ಆನಂದನ್ ರಂಗನಾಥನ್ ಟ್ವೀಟ್ ಮಾಡಿದ್ದು, ಮೈಸೂರುಪಾಕ್ ನ ಪಾಕ್ ನ ಭೌಗೋಳಿಕ ಗುರುತನ್ನು ತಮಿಳುನಾಡಿಗೆ ನೀಡುವ ಸಂಬಂಧ ಏಕಸದಸ್ಯ ಸಮಿತಿಯ ಪರವಾಗಿ  ಟೋಕನ್ ಆಫ್ ಅಪ್ರಿಸಿಯೇಷನ್ ನ್ನು ಸ್ವೀಕರಿಸಿದ್ದು ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮೈಸೂರು ಪಾಕ್ ನ ಭೌಗೋಳಿಕ ಗುರುತನ್ನು ತಮಿಳುನಾಡಿಗೆ ನೀಡುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ರಂಗನಾಥನ್ ತಿಳಿಸಿದ್ದಾರೆ.

ಮೈಸೂರು ಪಾಕ್ ನ ಇತಿಹಾಸ
ಮೈಸೂರು ಪಾಕ್‌ ಮೊದಲು ತಯಾರಾಗಿದ್ದು ಮೈಸೂರು ಅರಮನೆ ಅಡುಗೆಮನೆಯಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರು ಈ ಸಿಹಿಯನ್ನು ತಯಾರಿಸಿದರು. ಕಡಲೆ ಹಿಟ್ಟಿನ ಜತೆ ತುಪ್ಪ ಮತ್ತು ಸಕ್ಕರೆ ಮಿಶ್ರಣದ ಪಾಕ ತಯಾರಿಸಿ ಅದನ್ನು ಬೇಕೆಂದ ಆಕಾರಕ್ಕೆ ತುಂಬಿದರು.

ಒಣಗಿದ ನಂತರ ಅದು ಮಿಠಾಯಿ ರೀತಿಯಲ್ಲಿ ಕಂಡುಬಂತು. ಅದರ ಹೆಸರು ಕೇಳಿದಾಗ, ಮಾದಪ್ಪನವರು ಮನಸ್ಸಿನಲ್ಲಿ ಏನೂ ಆಲೋಚಿಸದ ಅವರು ಇದು ಕೇವಲ ‘ಮೈಸೂರು ಪಾಕ್‌’ ಎಂದು ಕರೆದರು. (ಪಾಕ್‌ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ