ಬೆಂಗಳೂರು, ಸೆ.15-ಶಾಸಕರ ವೇತನ ಹಾಗೂ ಇತರೆ ಭತ್ಯೆಯನ್ನು ಸೆ.20 ರಿಂದ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ವಿಧಾನಸಭೆ ಸಚಿವಾಲಯದಿಂದ ಇದುವರೆಗೂ ಶಾಸಕರ ವೇತನ ಮತ್ತು ಭತ್ಯೆಯನ್ನು ಧನಾದೇಶ ವಿತರಿಸುವ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ಆದರೆ ಎಲ್ಲಾ ವ್ಯವಹಾರಗಳನ್ನು ಖಜಾನೆ-2 ಮೂಲಕ ನಿರ್ವಹಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸೆ.20ರ ನಂತರ ಧನಾದೇಶದ ಮೂಲಕ ಪಾವತಿ ಮಾಡುವ ವ್ಯವಸ್ಥೆಯನ್ನು ರದ್ದುಪಡಿಸುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ.
ಹೀಗಾಗಿ ವಿಧಾನಸಭೆ ಸಚಿವಾಲಯವು ಎಲ್ಲಾ ಶಾಸಕರ ವೇತನ ಮತ್ತು ಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲು ಅನುಕೂಲವಾಗುವಂತೆ ಶಾಸಕರಿಂದ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಳ್ಳುತ್ತಿದೆ.
ಈ ಸಂಬಂಧ ವಿಧಾನಸಭೆ ಸಚಿವಾಲಯವು ಶಾಸಕರಿಗೆ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ನೂತನ ವ್ಯವಸ್ಥೆ ಜಾರಿಗೆ ಬಂದ ನಂತರ ಶಾಸಕರಿಗೂ ವೇತನ ಮತ್ತು ಭತ್ಯೆ ಅವರವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಲಿದೆ.