ಅಮೃತಸರದ ಅಟಾರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಿಯೋಗದ ನಡುವೆ ಸಮಾಲೋಚನೆ

ಅಟಾರಿ(ಅಮೃತಸರ್), ಪೆ.4-ಸಿಖ್ ಯಾತ್ರಿಕರಿಗೆ ಕರ್ತಾರ್‍ಪುರ್ ಕಾರಿಡಾರ್(ರಾಜಪಥ) ಕಾರ್ಯನಿರ್ವಹಣೆಗಾಗಿ ಕರಡು ಒಪ್ಪಂದ ಕುರಿತು ಚರ್ಚಿಸಲು ಮತ್ತು ಅದನ್ನು ಅಂತಿಮಗೊಳಿಸಲು ಪಂಜಾಬ್‍ನ ಅಮೃತಸರದ ಅಟಾರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಿಯೋಗದ ನಡುವೆ ಇಂದು ಮೂರನೇ ಸುತ್ತಿನ ಸಮಾಲೋಚನೆ ಪ್ರಗತಿಯಲ್ಲಿದೆ.

ಉಭಯ ದೇಶಗಳ ಗಡಿ ಪ್ರದೇಶವಾದ ಅಟಾರಿಯಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ಉಭಯ ದೇಶಗ ಪ್ರತಿನಿಧಿಗಳು ಒಡಂಬಡಿಕೆಯನ್ನು ಅಖೈರುಗೊಳಿಸುವ ಸಂಬಂಧ ಮಹತ್ವದ ಮಾತುಕತೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಭಾರತೀಯ ಸಂವಿಧಾನದ ಅರ್ಟಿಕಲ್ 370ಯನ್ನು ಕೇಂದ್ರ ಸರ್ಕಾರದ ರದ್ದುಗೊಳಿಸಿದ ನಂತರ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ನಡುವೆ ಇದು ಉಭಯ ದೇಶಗಳ ನಡುವೆ ನಡೆದ ಎರಡನೇ ಸಭೆಯಾಗಿದೆ.

ಪಾಕಿಸ್ತಾನದ ವಾಘಾದಲ್ಲಿ ಕಳೆದ ಜುಲೈನಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಸಭೆ ನಡೆದಿತ್ತು. ಪಾಕಿಸ್ತಾನದ ಕರ್ತಾರ್‍ಪುರ್‍ನಲ್ಲಿರುವ ಸಾಹಿಬ್ ಗುರುದ್ವಾರಕ್ಕೆ ಪ್ರತಿ ದಿನ 5,000 ಯಾತ್ರಿಕರಿಗೆ ಅವಕಾಶ ನೀಡಲು ಸಮ್ಮತಿ ಸೂಚಿಸಲಾಗಿತ್ತು.

ಭಾರತ-ಪಾಕಿಸ್ತಾನ ನಡುವೆ ಆಗಸ್ಟ್ 30ರಂದು ತಾಂತ್ರಿಕ ಪರಿಣಿತರ ಸಭೆ ನಡೆದು ಕರ್ತಾರ್‍ಪುರ್ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಇರುವ ಅಡ್ಡಿಆತಂಕಗಳ ಬಗ್ಗೆ ಸಭೆಯಲ್ಲಿ ಸಮಾಲೋಚಿಸಲಾಗಿತ್ತು.

ಈ ಕಾರಿಡಾರ್ ಪಂಜಾಬ್‍ನ ಗುರುದಾಸ್ ಪುರ್ ಜಿಲ್ಲೆಯ ಡೆರಾ ಬಾಬಾ ನಾನಕ್ ಮಂದಿರದೊಂದಿಗೆ ಪಾಕಿಸ್ತಾನದ ಕರ್ತಾರ್‍ಪುರ್‍ನ ದರ್ಬಾರ್ ಸಾಹಿಬ್ ಮಂದಿರದೊಂದಿಗೆ ಸಂಪರ್ಕ ಕಲ್ಪಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ