ಬೆಂಗಳೂರು ಆ 29: ಪೀಣ್ಯ ಕೈಗಾರಿಕಾ ಸಂಘವು ಆಗಸ್ಟ್ 30 ರಂದು ಸೂಕ್ಷ್ಮ ಮತ್ತು ಸಣ್ಣ ವರ್ಗದ ಕೈಗಾರಿಕೋದ್ಯಮಿಗಳಿಗೆ ಶೇಷ್ಠತಾ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ .
ಈ ಸಮಾರಂಭದಲ್ಲಿ ಡಾ।। ಸಿ. ಎನ್. ಅಶ್ವಥ್ ನಾರಾಯಣ್ , ಸನ್ಮಾನ್ಯ ಉಪ ಮುಖ್ಯ ಮಂತ್ರಿ ಕರ್ನಾಟಕ ಸರ್ಕಾರ ಅಧ್ಯಕ್ಷತೆ ವಹಿಸಲಿದ್ದು ಡಾ।। ಕೆ. ಸುಧಾಕರ್ ಸನ್ಮಾನ್ಯ ಶಾಸಕರು ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷರು, ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದು ಯೆಸ್ ಬ್ಯಾಂಕ್ ರವರು ಟೈಟಲ್ ಸ್ಪಾನ್ಸರ್ ರಾಗಿ ಸಹಯೋಗ ನೀಡಿರುವುದಲದೆ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು, ಸಹ ಉದ್ಯೋಗಿ ಮಿತ್ರರು ಬಹುರಾಷ್ಟ್ರೀಯ ಕಂಪನಿಗಳು,ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ನ ಪ್ರಮುಖರು ಹಾಗೂ ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸುವುದರಿಂದ ಎಲರೊಡನೆಯೂ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಈ ಪ್ರಶಸ್ತಿ ಪ್ರಧಾನವು ಸೂಕ್ಷ್ಮ ಮತ್ತು ಸಣ್ಣ ವರ್ಗದ ಕೈಗಾರಿಕೋದ್ಯೋಮಿಗಳಿಗೆ ಅವರ ಪರಿಶ್ರಮ ಕಾರ್ಯ ತತ್ಪರತೆ , ಮತ್ತು ಮಾರುಕಟ್ಟೆ ನೈಪುಣ್ಯತೆ ಹಾಗೂ ಪ್ರಖ್ಯಾತಿಯನ್ನು ಪರಿಗಣಿಸಿ ನೀಡಲಾಗುತ್ತಿರುವ ಪ್ರಶಸ್ತಿಯಾಗಿರುತದೆ. ಈ ಪ್ರಶಸ್ತಿಯನ್ನು ಗಳಿಸುವುಧು ಉದ್ಯಮಿಗಳಿಗೆ ಸಂತೃಪ್ತಿ, ಉಲ್ಲಾಸ ಹಾಗೂ ಸಂತೋಷವನ್ನು ಮೂಡಿಸುತ್ತದೆ. ಈ ಕಾರ್ಯಕ್ರಮವು ಬಹು ಅಪುರೂಪದ ಸಮಾರಂಭಗಳಲ್ಲೇ ಒಂದಾಗಿದ್ದು ಪ್ರಶಸ್ತಿ ವಿಜೇತರ ಸಂಭ್ರಮಾಚರಣೆಯ ಸಮಾರಂಭವಾಗಿರುತ್ತದೆ.
ವಿಜೇತರ ಆಯ್ಕೆಗಾಗಿ ತೀರ್ಪುಗಾರರಾದ ಶ್ರೀಮಾನ್.ಸುಬ್ರತೋ ಮಿತ್ರ ಮುಜುಂದಾರ್ , ಡಾ।। ಮಂಜುನಾಥ್ , ಶ್ರೀ. ಹೆಚ್.ಎಸ್.ಶ್ಯಾಮಸುಂದರ್, ಶ್ರೀಮತಿ ವೃಂಧಾ ವಿ.ಕಾಮತ್, ಶ್ರೀ.ಸಿ.ಜಿ ರಮಾನಾಥ್ ಒಳಗೊಂಡ ಸಮಿತಿ ರಚಿಸಿದ್ದು ವಿಜೇತರನ್ನು ಆಡಳಿತ ಮಂಡಳಿಯ ಸದಸ್ಯರನ್ನು ಹೊರತು ಪಡಿಸಿ ಸಾಮಾನ್ಯ ಸದಸ್ಯರಿಂದ ಪಾರದರ್ಶಕವಾಗಿ ಆಡಳಿತ ಮಂಡಳಿಯ ಹಸ್ತಕ್ಷೇಪವಿಲದೆ ನಿಷ್ಪಕ್ಷಪಾತವಾಗಿ ಆಯ್ಕೆ ಮಾಡಿ ಪಟ್ಟಿಯನ್ನು ತಯಾರಿಸಿದ್ದು ಈ ಎಲ್ಲಾ ವಿಜೇತರಿಗೆ ಆ 30 ರಂದು ವಿಶೇಷ ಪ್ರಶಸ್ತಿ ವಿಜೇತ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀಮಾನ್.ಎಂ.ಎಂ.ಗಿರಿಯವರು ಈ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸುತ್ತಾ ಭಾರತ ದೇಶದ ವ್ಯವಹಾರದಲ್ಲಿ ಶೇಕಡ ೪೦ ಭಾಗದಷ್ಟು ಸೂಕ್ಷ್ಮ ಮತ್ತು ಸಣ್ಣ ವರ್ಗದ ಕೈಗಾರಿಕೆಗಳದಾಗಿರುತ್ತದೆ. ಉದ್ಯೋಗಾವಕಾಶದ ಹಾಗೂ ಆರ್ಥಿಕ ಕ್ಷೇತ್ರದ ೧/೩ ಭಾಗದಷ್ಟು ಕೊಡುಗೆ ಈ ವಲಯದೇ ಆಗಿರುತ್ತದೆ.
ಕೈಗಾರಿಕೋದ್ಯಮಿಗಳು ಎದುರಾಗುವ ಸಂಕಷ್ಟಗಳಿಗೆ ಎದೆ ಗುಂದದೆ ಮುನ್ನುಗುತ್ತಾರೋ ಅವರು ಹೊಸ ತಂತ್ರ ಜ್ಞಾನ, ಹೊಸ ಮಾದರಿ, ಸಮಯ ಮತ್ತು ತಮ್ಮಲ್ಲಿರುವ ಬಂಡವಾಳದೊಂದಿಗೆ ಯಾವಾಗಲೂ ನಮ್ಮ ದೇಶದ ಆರ್ಥಿಕ ಬೆಳೆವಣಿಗೆಗೆ ಕೊಡುಗೆ ನೀಡುತ್ತಾರೆ.
ಶ್ರೀ ಎಂ ಎಂ ಗಿರಿ (ಅಧ್ಯಕ್ಷರು), ಶ್ರೀ ಆರಿಫ್ ಎಚ್ಎಂ (ಗೌರವಾನ್ವಿತ ಕಾರ್ಯದರ್ಶಿ), ಶ್ರೀ ಶ್ರೀನಿವಾಸ್ ಅಸ್ರಣ್ಣ (ಚುನಾಯಿತ ಅಧ್ಯಕ್ಷರು) ಮತ್ತು ಶ್ರೀ ಶಿವಕುಮಾರ್ ಆರ್ (ಜಂಟಿ ಕಾರ್ಯದರ್ಶಿ ಮತ್ತು ಅಧ್ಯಕ್ಷ MSME ಪ್ರಶಸ್ತಿ 2019) ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪೀಣ್ಯ ಕೈಗಾರಿಕೆ ಸಂಘವು ೧೯೭೮ರಲ್ಲಿ ಕೆಲವೇ ಉತ್ಸಹಿ ಉದ್ಯಮಿಗಳಿಂದ ಸ್ಥಾಪಿಸಲ್ಪಟ್ಟಿದ್ದು ಪ್ರಸಕ್ತ ಬೃಹಧಾಕರವಾಗಿ ಬೆಳೆದಿದ್ದು ೬೦೦೦ ಸದಸ್ಯ ಬಲವನ್ನು ಹೊಂದಿದೆ .