ಬೆಳಗಾವಿ,ಆ.28- ಕೇಂದ್ರ ಸರಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೆರೆಯಿಂದ ಸಾಕಷ್ಟು ಹಾನಿಯಾಗಿದ್ದರೂ ಒಂದು.ರು.ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಭೀಕರ ನೆರೆ ಬಂದೂ ಹಾನಿಯಾಗಿ 20 ದಿನ ಕಳೆದರೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನೆರೆ ಹಾನಿಯಿಂದ ಕರ್ನಾಟಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.ತುರ್ತಾಗಿ ಕೇಂದ್ರ ಸರಕಾರ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕಿದೆ ಎಂದ ಅವರು, ಪಾಪ ಪ್ರಧಾನಿ ನರೇಂದ್ರ ಮೋದಿಗೆ ವಿದೇಶಕ್ಕೆ ಹೋಗೊಕೆ ಸಮಸ ಸಿಗುತ್ತದೆ.ಆದರೇ ಕರ್ನಾಟಕ, ಮಹಾರಾಷ್ಟ್ರದಲ್ಲಿ ನೆರೆ ಬಂದಿದೆ.ವೈಮಾನಿಕ ಸಮೀಕ್ಷೆಯ ನಡೆಸುವ ಸಮಯ ಮೋದಿಗೆ ಇಲ್ಲ ಎಂದು ಹರಿಹಾಯ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಂ ಕಾಟಾಚಾರಕ್ಕೆ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಅವರಿಗೆ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿದರು.ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನಲ್ಲಿ ಇತ್ತೀಚೆಗೆ ಉಂಟಾದ ಭೀಕರ ಪ್ರವಾಹದಿಂದ ಲಕ್ಷಾಂತರ ಜನರು ತೊಂದರೆಗೆ ಒಳಗಾಗಿದ್ದಾರೆ.ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದ್ದು, ಅಪಾರ ಹಾನಿಯಾಗಿದೆ.ನೆರೆ ಸ್ಥಿತಿ ವೀಕ್ಷಣೆಗೆ ಆಗಮಿಸದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಸಮಯದಲ್ಲಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ.ಕೇಂದ್ರ ಸರ್ಕಾರ ರೈತರು ಮತ್ತು ಬಡವರ ಬಗ್ಗೆ ಕಾಳಜಿ ಇರುವ ಸರ್ಕಾರವಲ್ಲ. ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿದ್ದರೂ ಇದುವರೆಗೂ ರಾಜ್ಯಕ್ಕೆ ಒಂದು ರೂ.ಸಹ ಪರಿಹಾರ ಬಿಡುಗಡೆಯಾಗಿಲ್ಲ. ಜತೆಗೆ ರಾಜ್ಯದಲ್ಲಿ ಪ್ರವಾಹದಿಂದಾಗಿ ಇಷ್ಟಲ್ಲಾ ನಷ್ಟವಾಗಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಮಾಜಿಕ ಸಮೀಕ್ಷೆ ನಡೆಸಿಲ್ಲ. ಅವರಿಗೆ ವಿದೇಶಕ್ಕೆ ಹೋಗಲು ಸಮಯ ಸಿಗುತ್ತದೆ.ಅವರು ವಿದೇಶದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಗೆ ಅಮಿತ್ ಶಾ ಭೇಟಿಗೆ ಅವಕಾಶ ಸಿಗುತ್ತಿಲ್ಲ.ನಮ್ಮ ಮೇಲೆ ಆರೋಪ ಮಾಡುತ್ತಿದ್ದರು. ಹೈಕಮಾಂಡ್ ಕೈಗೊಂಬೆ ಅಂತ. ಈಹಾ ಬಿಜೆಪಿ ಹೈಕಮಾಂಡ್ ಕೈಗೊಂಬೆಯಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿರುವುದು ಗೊಂದಲ ವಿಚಾರ.ಬಿಜೆಪಿಗೆ 5 ವರ್ಷದ ಸರಕಾ ನಡೆಸುವ ಜನಾಭಿಪ್ರಾಯ ಇಲ್ಲ.ಅನೈತಿಕವಾದ ಶಿಶು ಬಿಜೆಪಿ ಸರಕಾರ. ಮದ್ಯಂತರ ಚುನಾವಣೆ ನಾವು ಬಯಸಲ್ಲ ಎಂದು ಸ್ಪಷ್ಟಪಡಿಸಿದರು.ಇಂದಿರಾ ಕ್ಯಾಂಟೀನ್ ಮುಚ್ಚದಂತೆ ಸಿಎಂಗೆ ಪತ್ರ:
ಇಂದಿರಾ ಕ್ಯಾಂಟಿನ್ ರಾಜ್ಯದ ಬಡ ಜನರಿಗಾಗಿ ತೆರಯಲಾಗಿದೆ.ವರ್ಷಕ್ಕೆ 200 ಕೋಟಿ ರು.ವೆಚ್ಚವಾಗುತ್ತದೆ. ಯಾವುದೇ ಕಾರಣಕ್ಕೂ ಸಿಎಂ ಇಂದಿರಾ ಕ್ಯಾಂಟೀನ್ ಮುಚ್ಚದಂತೆ ಪತ್ರ ಬರೆಯುತ್ತೇನೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಯಡಿಯೂರಪ್ಪ ಇಂದಿರಾ ಕ್ಯಾಂಟೀನ್ ಗೆ ಅನುದಾನ ಬಿಡುಗಡೆ ಮಾಡಬೇಕೆಂದರು.ಕೆಎಸ್ ಈಶ್ವರಪ್ಪ ಮೂರ್ಖ ಎನ್ನುವ ಬದಲು ಯಡಿಯೂರಪ್ಪ ಎಂದ ಸಿದ್ದರಾಮಯ್ಯ.ಆಪರೇಷನ್ ಜನಕ ಸಿದ್ದರಾಮಯ್ಯ ಎಂದು ಹೇಳಿದ್ದ ಈಶ್ವರಪ್ಪ. ಟಾಂಗ್ ಕೊಡಲು ಹೋಗಿ ಸಿಎಂ ಯಡಿಯೂರಪ್ಪಗೆ ಮುರ್ಖ ಎಂದರು.