ಮಳವಳ್ಳಿ, ಮಾ.31-ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ.
ಪಟ್ಟಣದ ತಮ್ಮಡಳ್ಳಿ ರಸ್ತೆ, ಗಂಗಾಮತ ಬೀದಿ ನಿವಾಸಿ ಗಂಗಮ್ಮ ಅಲಿಯಾಸ್ ಪವಿತ್ರ (24) ಮೃತಪಟ್ಟಿರುವ ಗೃಹಿಣಿ. ಈಕೆ ಚಂದ್ರಶೇಖರ್ ಎಂಬಾತನನ್ನು ವಿವಾಹವಾಗಿದ್ದು, ಪತಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಚಂದ್ರಶೇಖರ್ ಪತ್ನಿ ಪವಿತ್ರಾಳ ಶೀಲ ಶಂಕಿಸಿ ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆ ರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿದ್ದು, ಚಂದ್ರಶೇಖರ್ ತನ್ನ ಇಬ್ಬರು ಮಕ್ಕಳನ್ನು ಅದೇ ಬೀದಿಯಲ್ಲಿರುವ ಅಣ್ಣನ ಮನೆಗೆ ಬಿಟ್ಟು ಬಂದಿದ್ದಾನೆ. ಜಗಳ ನಡೆದಿರುವ ವಿಚಾರ ಪವಿತ್ರ ಅವರ ತಮ್ಮ ಧನರಾಜ್ಗೆ ತಿಳಿದು ಈ ಬಗ್ಗೆ ವಿಚಾರಿಸಲು ಇಂದು ಬೆಳಗ್ಗೆ ಪವಿತ್ರ ಮನೆಗೆ ಬಂದಿದ್ದಾನೆ. ಆದರೆ ಮನೆಯಲ್ಲಿ ಪವಿತ್ರ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ನನ್ನ ಭಾವನೇ ಕೊಲೆ ಮಾಡಿ ನೇಣು ಬಿಗಿದಿದ್ದಾನೆ ಎಂದು ಧನರಾಜ್ ಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಶ್ರೀಕಾಂತ್ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಚಂದ್ರಶೇಖರ್ ಪರಾರಿಯಾಗಿದ್ದು, ಈತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.