ನವದೆಹಲಿ,ಆ.25- ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಅಂತ್ಯ ಕ್ರಿಯೆ ಅಪರಾಹ್ನ ್ನ ರಾಜಧಾನಿ ನವದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಜೇಟ್ಲಿ ಅವರು ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಅನೇಕ ಗಣ್ಯರು, ಬಂಧು-ಮಿತ್ರರರು ಜೇಟ್ಲಿ ಅವರು ಪಾರ್ಥಿವ ಶರೀರದ ದರ್ಶನ ಮಾಡಿ ಕಂಬನಿ ಮಿಡಿದರು.
ನಂತರ ಜೇಟ್ಲಿ ಅವರ ಕಳೆಬರಹವನ್ನು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಕೊಂಡೊಯ್ಯದು ಸಾರ್ವಜನಿಕರು, ಪಕ್ಷದ ಕಾರ್ಯಕರ್ತರ ಅಂತಿಮ ದರ್ಶನಕ್ಕೆ ಇಡಲಾಗುವುದು. ನಾಳೆ ಅಪರಾಹ್ನ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದ್ದು, ಗಣ್ಯಾತಿಗಣ್ಯರು ಪಾಲ್ಗೊಂಡು ಅಗಲಿದೆ ನಾಯಕಿನಿಗೆ ಅಂತಿಮ ವಿದಾಯ ವಂದನೆ ಸಲ್ಲಿಸಿದ್ದಾರೆ.