ಅರುಣ್ ಜೈಟ್ಲಿಯವರ ರಾಜಕೀಯ ಜೀವನ,-ವೈಯಕ್ತಿಕ ಜೀವನ

 

1977ರಲ್ಲಿ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ಮತ್ತು ಎಬಿವಿಪಿಯ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕ.
1980ರಲ್ಲಿ ಬಹಳ ವರ್ಷಗಳ ಎಬಿವಿಪಿ ಸಂಪರ್ಕದ ನಂತರ ಬಿಜೆಪಿ ಸೇರ್ಪಡೆ.
ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ದೆಹಲಿಯ ಕಾರ್ಯದರ್ಶಿಯಾಗಿ ನೇಮಕ
1991ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ
1998ರಲ್ಲಿ ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿ ಸೆಷನ್‍ನಲ್ಲಿ ಭಾರತ ಸರ್ಕಾರದ ಪರ ಅರುಣ್ ಜೇಟ್ಲಿ ಪ್ರತಿನಿಸಿದ್ದರು . ಡ್ರಗ್ಸ್ ಬಗ್ಗೆ ಮಸೂದೆ ಮಂಡನೆ
1999ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೂ ಸ್ವಲ್ಪ ಮುನ್ನ ಬಿಜೆಪಿ ವಕ್ತಾರರಾಗಿ ನೇಮಕ
ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವ ಹಾಗೂ ಕಾನೂನು ಸಚಿವಾಲಯವನ್ನೂ ಮುನ್ನಡೆಸುತ್ತಿದ್ದರು.
2000ರಲ್ಲಿ ಮೊದಲ ಬಾರಿಗೆ ಗುಜರಾತ್‍ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ.
ರಾಮ್ ಜೇಠ್ಮಲಾನಿ ರಾಜೀನಾಮೆಯ ನಂತರ, ಸಂಪುಟ ಸಚಿವನಾಗಿ ನವೆಂಬರ್ 2000ರಲ್ಲಿ ಸೇರ್ಪಡೆ. ಅದೇ ಕ್ಯಾಬಿನೆಟ್‍ನಲ್ಲಿ ಕಾನೂನು ಸಚಿವರಾಗಿ ಕಾರ್ಯನಿರ್ವಹಣೆ. ಸಿಪಿಸಿ ಮತ್ತು ಕಂಪನಿ ಕಾಯ್ದೆಗೆ ಪ್ರಮುಖ ತಿದ್ದುಪಡಿ.
2002ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ. 2003ರವರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಷ್ಟ್ರೀಯ ವಕ್ತಾರನಾಗಿ ನೇಮಕ
2003ರಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಕಾನೂನು-ನ್ಯಾಯ ಸಚಿವರಾಗಿ ಪುನಃ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ. 2004ರವರೆಗೂ ಈ ಜವಾಬ್ದಾರಿಯಲ್ಲೇ ಮುಂದುವರಿದರು. ವಾಣಿಜ್ಯ ಸಚಿವರಾಗಿದ್ದ ವೇಳೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಭಾರತೀಯ ಮಾರುಕಟ್ಟೆಯಲ್ಲಿಹೆಚ್ಚಿನ ಷೇರು ಹೊಂದುವ ಉದ್ದೇಶದಿಂದ ಹೆಚ್ಚು ತೆರಿಗೆಯನ್ನು ವಿಸುತ್ತಿತ್ತು. ಮಾತುಕತೆಯ ಮೂಲಕ ತೆರಿಗೆಯನ್ನು ಇಳಿಸಿದ್ದ ಜೇಟ್ಲಿ.
• 2006
ರಾಜ್ಯಸಭೆಗೆ ಆಯ್ಕೆ. ಮೂರನೇ ಬಾರಿಗೆ 2012ರಲ್ಲಿ ಗುಜರಾತ್‍ನಿಂದ ರಾಜ್ಯಸಭೆಗೆ ಆಯ್ಕೆ.
• 2009-12
ವಿರೋಧ ಪಕ್ಷದ ನಾಯಕನಾಗಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿ. ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯ ವೇಳೆ ಸಹಕಾರಿಯಾಗಿದ್ದರು ಅಲ್ಲದೇ ಅಣ್ಣಾಹಜಾರೆಯ ಜನಲೋಕಪಾಲ್ ಮಸೂದೆಗೂ ಬೆಂಬಲಿಸಿದ್ದರು.
• ಮೇ 26, 2016
ಮೋದಿ ಕ್ಯಾಬಿನೆಟ್‍ನಲ್ಲಿ ವಿತ್ತಸಚಿವರಾಗಿ ಅಕಾರ ಸ್ವೀಕಾರದ ಜತೆಗೆ ರಕ್ಷಣಾ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ.

ವೈಯಕ್ತಿಕ ಜೀವನ
ಅರುಣ್ ಜೇಟ್ಲಿ ಅವರು ವಕೀಲರು, ಸಾಮಾಜಿಕ ಕಾರ್ಯಕರ್ತರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಮಹಾರಾಜ್ ಕಿಶೆನ್ ಜೇಟ್ಲಿ ಕೂಡ ವಕೀಲರಾಗಿದ್ದು, ಇಡೀ ಕುಟುಂಬ ನವದೆಹಲಿಯ ನಾರೈನಾ ವಿಹಾರದಲ್ಲಿ ವಾಸವಾಗಿತ್ತು. ಅವರ ತಾಯಿ ರತನ್ ಪ್ರಭಾ ಗೃಹಿಣಿಯಾಗಿದ್ದರೂ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದರು. ಅರುಣ್ ಜೇಟ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಿಂದ (1957-69) ತನ್ನ ಶಾಲಾ ಶಿಕ್ಷಣವನ್ನು ಮಾಡಿದರು. ಅವರಿಗೆ ಅಧ್ಯಯನ, ಚರ್ಚೆಗಳು ಮತ್ತು ಕ್ರಿಕೆಟ್‍ನಂಥ ಕ್ರೀಡೆಗಳೆಂದರೆ ಪಂಚ ಪ್ರಾಣ. ಅವರು ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‍ನಿಂದ ಪದವಿ ಪಡೆದರು ಮತ್ತು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ನಂತರ, ಎಲïಎಲïಬಿ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಿಂದ ಪಡೆದರು(1973-77).
ಬಾಲ್ಯದಿಂದಲೂ ಅರುಣ್ ಜೇಟ್ಲಿ ಅವರಿಗೆ ಕಾನೂನು ಮತ್ತು ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಅವರು ಗಳಿಸಿದ ಗೆಲುವು ಅವರ ರಾಜಕೀಯ ಜೀವನದ ದಾರಿಯನ್ನು ಮತ್ತಷ್ಟು ಗಟ್ಟಿಯಾಗಿಸಿತ್ತು. ಜನತಾ ಪಕ್ಷದ ಚಟುವಟಿಕೆಗಳಿಂದ ಪ್ರಭಾವಿತರಾದ ಅವರು, ನಂತರ ಜನತಾ ಪಕ್ಷದ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಚಳವಳಿಯಲ್ಲಿ ಸೇರಿಕೊಂಡು ಉನ್ನತ ಅಕಾರಿಗಳ ದುರ್ವರ್ತನೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಅರುಣ್ ಜೇಟ್ಲಿ ಅವರು ಗಿರಿಧರ್ ಲಾಲ್ ದೋಗ್ರಾ ಮತ್ತು ಶಕುಂತಲಾ ದೋಗ್ರಾ ಅವರ ಪುತ್ರಿಯಾದ ಸಂಗೀತಾರನ್ನು ಮದುವೆಯಾಗಿದ್ದು, ಸೋನಾಲಿ ಜೇಟ್ಲಿ ಮತ್ತು ರೋಹನ್ ಜೇಟ್ಲಿ ಎಂಬ ಇಬ್ಬರು ಮಕ್ಕಳಿz್ದÁರೆ. ಇವರಿಬ್ಬರೂ ವಕೀಲರು.

ರಾಜಕೀಯಕ್ಕೆ ಹಾದಿ
1974ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದಾಗಿನಿಂದ ಅವರು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಕಾಂಗ್ರೆಸ್ ಆಡಳಿತವು ಬಹಳ ಪ್ರಬಲವಾಗಿದ್ದ ಸಮಯದಲ್ಲಿ, ಎಬಿವಿಪಿಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರು ಜನರಲ್ಲಿ ಅಚ್ಚರಿ ಮೂಡಿಸಿದ್ದರು. ಅವರು ಜೈ ಪ್ರಕಾಶ್ ನಾರಾಯಣ್ ಅವರ ಅನುಯಾಯಿಗಳಾಗಿದ್ದರು ಮತ್ತು ಅವರನ್ನು ಅವರ ಮಾರ್ಗದರ್ಶಕರಾಗಿ ಪರಿಗಣಿಸಿದರು. 1975ರಲ್ಲಿ 22 ತಿಂಗಳು ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ, ಬಂಧನಕ್ಕೊಳಗಾದ ನಾಯಕರಲ್ಲಿ ಅರುಣ್ ಜೇಟ್ಲಿ ಒಬ್ಬರಾಗಿದ್ದರು ಮತ್ತು ದೆಹಲಿಯ ತಿಹಾರ್ ಜೈಲಿನಲ್ಲಿ 19 ತಿಂಗಳು ಜೈಲಿನಲ್ಲಿದ್ದರು. ಜೈಲಿನಲ್ಲಿz್ದÁಗ ವಿವಿಧ ಹಿನ್ನೆಲೆಯ ಜನರನ್ನು ಕಂಡಿದ್ದರಿಂದ ಈ ಹಂತವೇ ಅವರ ಜೀವನದ ಮಹತ್ವದ ತಿರುವು ಎಂದು ಅವರು ಪರಿಗಣಿಸಿದರು.
1977ರಲ್ಲಿ, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿ, ಜನತಾ ಪಕ್ಷ ಅಕಾರಕ್ಕೆ ಬಂದಾಗ, ಅರುಣ್ ಜೇಟ್ಲಿ ಅವರು ಲೋಕತಾಂತ್ರಿಕ್ ಯುವ ಮೋರ್ಚಾದ ಸಂಚಾಲಕರಾಗಿದ್ದರು.

ಕಾನೂನು ಜೀವನ
• 1977ರಲ್ಲಿ ಅರುಣ್ ಜೇಟ್ಲಿಯವರು ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ಕೋರ್ಟ್‍ಗಳಲ್ಲೂ ವಕೀಲ ವೃತ್ತಿಯನ್ನು ಶುರು ಮಾಡಿದ್ದರು.
• 1990ರಲ್ಲಿ ಜೇಟ್ಲಿಯವರು ಹಿರಿಯ ವಕೀಲರಾಗಿ ಬಡ್ತಿಯನ್ನು ಪಡೆಯುವುದರೊಂದಿಗೆ ದೇಶದ ಅಡ್ವೋಕೇಟ್ ಸಾಲಿಸಿಟರ್ ಜನರಲ್ ಆಗಿಯೂ ನೇಮಕಗೊಂಡರು. ಈ ವೇಳೆ ಅವರು ಬೊಫೆÇೀರ್ಸ್ ಸೇರಿದಂತೆ ಹಲವು ಪ್ರಕರಣಗಳಲ್ಲೂ ಕೆಲಸ ಮಾಡಿದ್ದರು.
• ಕೇಂದ್ರ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿ ಅವರು ಹಲವಾರು ಚುನಾವಣಾ ಮತ್ತು ನ್ಯಾಯಾಂಗ ಸುಧಾರಣೆಗಳನ್ನು ತಂದರು. ಅವರು ವಕೀಲರ ಕಲ್ಯಾಣ ನಿ ಮತ್ತು ಹೂಡಿಕೆದಾರರ ಸಂರಕ್ಷಣಾ ನಿಯನ್ನು ಸ್ಥಾಪಿಸಿದರು. ನ್ಯಾಯಾಲಯಗಳ ಗಣಕೀಕರಣದ ವಿಶೇಷ ಗಮನ ಹರಿಸಿದ್ದ ಅವರು ವೇಗವಾಗಿ ವಿಚಾರಣೆ ನಡೆಯುವ ಫಾ¸್ಟïಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆಯನ್ನು ಜÁರಿಗೆ ತಂದಿದ್ದರು. ಪ್ರಕರಣಗಳ ತ್ವರಿತ ವಿಲೇವಾರಿಗೆ ಅನುಕೂಲವಾಗುವಂತೆ, ಮೋಟಾರು ವಾಹನ ಕಾಯ್ದೆ ಮತ್ತು ನೆಗೋಶಿಯಬಲ್ ಇನ್ಸ್‍ಟ್ರುಮೆಂಟ್ಸ್ ಕಾಯ್ದೆಯಲ್ಲಿ ತಿದ್ದುಪಡಿ ತಂದರು.
• ಅಚ್ಚರಿಯ ಸಂಗತಿಯೇನೆಂದರೆ ಛತ್ತೀಸ್‍ಗಢ, ಜಾರ್ಖಂಡ್ ಮತ್ತು ಉತ್ತರಾಖಂಡದ ಹೈಕೋರ್ಟ್‍ಗಳು ಇವರ ಮಾರ್ಗದರ್ಶನದ ಅನುಸಾರವೇ ನಿರ್ಮಿಸಲಾಗಿದೆ.
• ಶರದ್ ಯಾದವ್, ಮಾಧವರಾವ್ ಸಿಂಧ್ಯ, ಎಲ್.ಕೆ. ಆದ್ವಾನಿ ಸೇರಿದಂತೆ ಹಲವು ನಾಯಕರು ಅವರ ಕಕ್ಷಿದಾರರಾಗಿದ್ದರು.
• ಕೋಕಾಕೋಲ, ಪೆಪ್ಸಿ ಆದಿಯಾಗಿ ಹತ್ತು ಹಲವು ಎಂಎನ್‍ಸಿಗಳು ಮತ್ತು ಉದ್ಯಮಿಗಳ ಪರ ಕೋರ್ಟ್‍ನಲ್ಲಿ ವಾದಿಸಿದ್ದರು.
• 2002ರಲ್ಲಿ ಭಾರತದ ಸಂವಿಧಾನದ 84ನೇ ತಿದ್ದುಪಡಿಯನ್ನೂ ಯಶಸ್ವಿಯಾಗಿ ಪರಿಚಯಿಸಿದರು.
• ಪಕ್ಷಾಂತರ ಮಾಡುವವರಿಗೆ ದಂಡ ವಿಸುವುದಕ್ಕಾಗಿ ಅವರು 2004ರಲ್ಲಿ ಭಾರತದ ಸಂವಿಧಾನಕ್ಕೆ 91ನೇ ತಿದ್ದುಪಡಿಯನ್ನು ಪರಿಚಯಿಸಿದರು.

ಇನ್ನಷ್ಟು ಸಾಧನೆಗಳು
• ಎಂಟು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಅವರು ಪ್ರಮುಖ ಅತ್ಯಂತ ಪಾತ್ರ ವಹಿಸಿz್ದÁರೆ.
• ಗುಜರಾತ್‍ನಲ್ಲಿ, ನರೇಂದ್ರ ಮೋದಿಯವರು 2002ರ ವಿಧಾನಸಭಾ ಚುನಾವಣೆಯಲ್ಲಿ 182ರಲ್ಲಿ 126 ಸ್ಥಾನಗಳನ್ನು ಗಳಿಸುವ ಮೂಲಕ ಗೆಲ್ಲಲು ಸಹಾಯ ಮಾಡಿ ಕೊಟ್ಟಿದ್ದು ಅರುಣ್ ಜೇಟ್ಲಿ. 2007ರಲ್ಲಿ ಗುಜರಾತ್‍ನಲ್ಲಿ 182ರಲ್ಲಿ 117 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮೋದಿಗೆ ಮತ್ತೆ ಅಕಾರಕ್ಕೆ ಬರಲು ಸಹಾಯ ಮಾಡಿದ್ದರು.
• 2003ರಲ್ಲಿ ಉಮಾ ಭಾರತಿಯ ಜತೆ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಸಿದರು.
• 2004ರಲ್ಲಿ, ಲೋಕಸಭಾ ಚುನಾವಣೆಯ ಸಮಯದಲ್ಲಿಯೇ, ಕರ್ನಾಟಕ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಲಾಯಿತು. ಈ ವೇಳೆ ಬಿಜೆಪಿ 26 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳು ಮತ್ತು ವಿಧಾನಸಭಾ ಚುನಾವಣೆಯಲ್ಲಿ 83 ಸ್ಥಾನಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಇವರ ಚಾಣಕ್ಯ ತಂತ್ರಕ್ಕೆ ಹಿಡಿದ ಕನ್ನಡಿ.
• 2007ರಲ್ಲಿ, ಅರುಣ್ ಜೇಟ್ಲಿಯವರನ್ನು ಎಂಸಿಡಿ(ಮುನ್ಸಿಪಲ್ ಕಾಪೆರ್Çರೇಷನ್ ಆಫ್ ದೆಹಲಿ)ಗೆ ಚುನಾವಣೆಯ ಉಸ್ತುವಾರಿಯನ್ನಾಗಿ ಮಾಡಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆಗ ಬಿಜೆಪಿ 272ರಲ್ಲಿ 184 ವಾರ್ಡ್‍ಗಳನ್ನು ಗೆದ್ದಿತು.
• ಕ್ರಿಕೆಟ್ ಆಟ ಮತ್ತು ಅದರ ಜತೆಗಿನ ಒಡನಾಟ ಇದ್ದಿದ್ದರಿಂದ ಬಿಸಿಸಿಐ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣವಾದಾಗ ಅವರು ರಾಜೀನಾಮೆ ನೀಡಿದ್ದರು.
• ಇಷ್ಟೇ ಅಲ್ಲದೇ, ತಮ್ಮ ಜೀವನದ ಮೊದಲ ಪ್ರೀತಿ: ರಾಜಕೀಯದತ್ತ ಗಮನ ಹರಿಸುವುದಕ್ಕಾಗಿ ದೆಹಲಿ ಜಿ¯್ಲÁ ಕ್ರಿಕೆಟ್ ಸಂಘದ ಅಧ್ಯಕ್ಷ ಹುz್ದÉಗೆ 13 ವರ್ಷಗಳ ಸೇವೆಯ ನಂತರ ರಾಜೀನಾಮೆ ನೀಡಿದ್ದರು. ದೆಹಲಿಯ ಕ್ರೀಡಾಂಗಣದ ಗುಣಮಟ್ಟವನ್ನು ಸುಧಾರಿಸಲು ಅವರು ಹೆಚ್ಚಿನ ಕೊಡುಗೆ ನೀಡಿದ್ದು, ಇದನ್ನು ಬಿಸಿಸಿಐ ಅತ್ಯುತ್ತಮ ಗುಣಮಟ್ಟದ್ದು ಎಂದು ಪರಿಗಣಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ