ಬೆಂಗಳೂರು, ಆ.23- ದೇಶದ ಮುಂಚೂಣಿ ಪಠ್ಯ ಸಾಮಗ್ರಿಗಳ ಉತ್ಪಾದನಾ ಸಂಸ್ಥೆ ತನ್ನ ಹೊಸ ಆವಿಷ್ಕಾರದೊಂದಿಗೆ ದಿ ಕ್ಲಾಸ್ಮೇಟ್ ಪಲ್ಸ್ 3ಡಿ ನೋಟ್ಬುಕ್ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
3 ಡೈಮೆನ್ಷನ್ ಕವರ್, ಲೆಂಟಿಕ್ಯುಲರ್ ಬೋರ್ಡ್ ಮೂಲಕ ಸಕ್ರಿಯಗೊಳಿಸುವ ಅನುಭವ ನೀಡಲಿದೆ.
ಕ್ಲಾಸ್ಮೇಟ್ ಪಲ್ಸ್ನ 3ಡಿ ನೋಟ್ಬುಕ್ ವಿವಿಧ ವಿನ್ಯಾಸಗಳ ಶ್ರೇಣಿಗಳಲ್ಲಿ ಸಿಗಲಿದೆ. ಗ್ರಾಹಕರಿಗೆ ಉತ್ಪನ್ನದ ಅನುಭವ ಹಾಗೂ ಮಕ್ಕಳ ಕಲಿಕೆಗೂ ಪೋ ನೀಡಲಿದೆ ಎಂದು ಸಂಸ್ಥೆ ಹೇಳಿದೆ.
ಇದು ಇಂಟರ್ಚೇಂಜೆಬಲ್ ನೋಟ್ಬುಕ್ ಆಗಿದ್ದು, ಇದನ್ನು ಬಳಸುವವರು ನೋಟ್ಬುಕ್ ಕವರ್ಅನ್ನು ಪದೇ ಪದೇ ಬದಲಾಯಿಸಬಹುದು. ಪ್ರತಿದಿನ ಒಂದೊಂದು ರೀತಿಯ ಕವರ್ ಹೊಂದಬಹುದಾಗಿದೆ.