ಬೆಂಗಳೂರು, ಆ.23- ಬಸವೇಶ್ವರ ನಗರದ ಸತ್ಯನಾರಾಯಣ ಲೇಔಟ್ನಲ್ಲಿರುವ ಸತ್ಯ ಗಣಪತಿ ಸ್ವಾಮಿ ಟೆಂಪಲ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸೆ. 2ರಿಂದ 4ರವರೆಗೆ ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2 ರಂದು ಬೆಳಗ್ಗೆ 6.30ಕ್ಕೆ ಸತ್ಯಗಣಪತಿಗೆ ಪಂಚಾಮೃತ ಅಭಿಷೆಕ ಹಾಗೂ ವಿಶೇಷ ಪೂಜೆ ಮಾಡಲಾಗುವುದು 9ಗಂಟೆಗೆ ಸ್ವರ್ಣಗೌರಿ ಹಬ್ಬದ ಪ್ರಯುಕ್ತ ಸ್ವರ್ಣಗೌರಿ ಮೂರ್ತಿಗೆ ವ್ರತಾಚರಣೆ ಏರ್ಪಡಿಸಲಾಗಿದೆ.
ಕಾರ್ಯಕ್ರಮಕ್ಕೆ ಮಾಜಿ ಶಾಸಕ ಗೋಪಾಲಯ್ಯ, ಬಿಬಿಎಮ್ಪಿ ಮಾಜಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಶಿವರಾಜ್, ಗಂಗಮ್ಮ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಮೂರು ದಿನಗಳ ಕಾಲ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು, 3ರಂದು ನಡೆಯಲಿರುವ ಸಹಸ್ರ ಮೋದಕ ಹೋಮದ ಸೇವೆ ನಡೆಯಲಿದೆ ಎಂದು ಶ್ರೀ ಸತ್ಯ ಗಣಪತಿ ಸ್ವಾಮಿ ಟೆಂಪಲ್ ಧರ್ಮದರ್ಶಿಗಳು ತಿಳಿಸಿದ್ದಾರೆ.