ಬೆಂಗಳೂರು, ಆ.23- ಪ್ರೇಮಂ ಪೂಜ್ಯಾಮ್ ನನ್ನ ವೃತ್ತಿ ಜೀವನದ 25ನೇ ಸಿನಿಮಾದ ಹಾಡೊಂದನ್ನು ಪುನೀತ್ ರಾಜ್ಕುಮಾರ್ ಅವರು ಹಾಡಿರುವುದಕ್ಕೆ ನಟ ಪ್ರೇಮ್ ಧನ್ಯವಾದ ಅರ್ಪಿಸಿದ್ದಾರೆ.
ಇಲ್ಲಿಯವರೆಗೂ ನೀವು ಅನೇಕ ಹಾಡುಗಳನ್ನು ಹಾಡಿದ್ದೀರಿ. ಆದರೆ ಅಪ್ಪಾಜಿಯವರ (ಡಾಕ್ಟರ್ ರಾಜಕುಮಾರ್) ಬಗ್ಗೆ ನೀವು ಮೊದಲನೆ ಬಾರಿ ಹಾಡಿದ್ದು ಎಂದು ನಿಮ್ಮಿಂದಲೇ ತಿಳಿದು ತುಂಬ ಸಂತೋಷವಾಯಿತು ಎಂದು ತಿಳಿಸಿದ್ದಾರೆ.
ನೀವೇ ನನ್ನನ್ನು ಕರೆದು ನಿಮ್ಮ ಮೊಬೈಲ್ ಪೋನಿಂದಲೇ ನನ್ನ ಜೊತೆ ಸೆಲ್ಫೀ ಪೋಟೋ ತೆಗೆದಿರಿ. ನೀವು ನಿಜಕ್ಕೂ ತಂದೆಗೆ ತಕ್ಕ ಮಗ. ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸೂ ಆರೋಗ್ಯ ಸದಾ ಯಶಸ್ಸನ್ನು ಕೊಟ್ಟು ಕಾಪಾಡಲಿ ಎಂದು ನಟ ಪ್ರೇಮ್ ವೈಯಕ್ತಿಕವಾಗಿ ಹಾಗೂ ಚಿತ್ರತಂಡದ ಪರವಾಗಿ ಶುಭ ಹಾರೈಸಿದ್ದಾರೆ.