ಏರ್ ಇಂಡಿಯಾ ಸಂಸ್ಥೆಯಿಂದ ಇಂಧನ ಮೊತ್ತ ಬಾಕಿ

ನವದೆಹಲಿ, ಆ.23- ಸಮಸ್ಯೆಗಳ ಸುಳಿಯಿಂದ ಮೇಲೆರಲು ಹೆಣಗುತ್ತಿರುವ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದೇಶದ ಮೂರು ಪ್ರತಿಷ್ಠಿತ ಮೂರು ತೈಲ ಸಂಸ್ಥೆಗಳಿಗೆ 4,500ಕೋಟಿ ರೂ. ಮೌಲ್ಯದ ಇಂಧನ ಪಾವತಿಯನ್ನು ಬಾಕಿ ಉಳಿಸಿಕೊಂಡಿದೆ.

ಕಳೆದ 200ದಿನಗಳಿಂದ (ಸುಮಾರು 7ತಿಂಗಳು) ಏರ್ ಇಂಡಿಯಾ ಸಂಸ್ಥೆಯಿಂದ ಇಂಧನ ಮೊತ್ತ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ಭಾರತೀಯ ತೈಲ ಸಂಸ್ಥೆ (ಐಒಸಿ), ಭಾರತ ಪೆಟ್ರೊಲಿಮ್ ನಿಗಮ ನಿಯಮಿತ (ಬಿಪಿಸಿಎಲ್) ಹಾಗೂ ಹಿಂದೂಸ್ಥಾನ್ ಪೆಟ್ರೊಲಿಮ್ ನಿಗಮ ನಿಯಮಿತ (ಎಚ್‍ಪಿಸಿಎಲ್) ಈ ಮೂರು ಸಂಸ್ಥೆಗಳು ಇಂದು ಬೆಳಗ್ಗೆಯಿಂದ ಏರ್ ಇಂಡಿಯಾ ಸಂಸ್ಥೆ ವಿಮಾನಗಳಿಗೆ ಜೆಟ್ ಇಂಧನ ಪೂರೈಕೆ ಸ್ಥಗಿತಗೊಳಿಸಿದೆ.

ಪುಣೆ, ಕೊಚ್ಚಿ, ಪಾಟ್ನಾ, ರಾಂಚಿ, ಮೊಹಾಲಿ ಮತ್ತು ವಜಾಗ್ ಈ ವಿಮಾನ ನಿಲ್ದಾಣಗಳಲ್ಲಿನ ಏರ್ ಇಂಡಿಯಾ ವಿಮಾನಗಳಿಗೆ ಇಂಧನ ಪೂರೈಕೆಯನ್ನು ಈ ಮೂರು ಸಂಸ್ಥೆಗಳು ನಿಲ್ಲಿಸಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.

ಸಾಮಾನ್ಯವಾಗಿ ತನ್ನ ವಿಮಾನಗಳಿಗೆ ಇಂಧನ ತುಂಬಿಸಿಕೊಂಡ ನಂತರ 90ದಿನಗಳ ಒಳಗೆ (ಮೂರು ತಿಂಗಳ) ಹಣ ಪಾವತಿಸಬೇಕು. ಆದರೆ ಈ ಸಂಸ್ಥೆ 7ತಿಂಗಳಾದರೂ ಇಂಧನ ಮೊತ್ತ ಬಾಕಿ ಪಾವತಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ