ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ:

ನವದೆಹಲಿ,ಮಾ.31-ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ನಾಳೆಯಿಂದ ಆರಂಭವಾಗಲಿದೆ. ದೇಶದಾದ್ಯಂತ ಸೇವೆ ಶುರು ಮಾಡಲಿರುವ
ಇಂಡಿಯನ್ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಏರ್‍ಟೆಲ್ ಹಾಗೂ ಪೇಟಿಎಂ ನಂತರ ದೇಶದ ಮೂರನೇ ಪೇಮೆಂಟ್ ಬ್ಯಾಂಕ್ ಆಗಲಿದೆ. ದೇಶದ 1.55 ಲಕ್ಷ ಅಂಚೆ ಕಚೇರಿಯಲ್ಲಿ ಈ ಸೇವೆ ಪ್ರಾರಂಭವಾಗಲಿದೆ.
ಪೆÇೀಸ್ಟ್ ಮಾಸ್ಟರ್ ಹಾಗೂ ಅಂಚೆ ಕಚೇರಿ ಶಾಖೆಗಳ ಮೂಲಕ ಈ ಸೇವೆ ಜನರನ್ನು ತಲುಪಲಿದೆ. ಇದಕ್ಕಾಗಿ ಐಪಿಪಿಬಿಯ 650 ಶಾಖೆಗಳು ನೆಟ್ವರ್ಕ್ ಕೆಲಸ ಮಾಡಲಿದೆ. ಈ ಸೇವೆ ದೇಶದಾದ್ಯಂತ ವಿಸ್ತರಣೆಯಾದ್ರೆ ದೇಶದ ಆರ್ಥಿಕ ನೆಟ್ವರ್ಕ್ ಮತ್ತಷ್ಟು ಬಲಪಡೆಯಲಿದೆ ಎಂದು ಭಾರತೀಯ ಅಂಚೆ ಇಲಾಖೆ ಹೇಳಿದೆ.
ಈವರೆಗೂ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದ ಪ್ರದೇಶಗಳಿಗೆ ಪೆÇೀಸ್ಟ್ ಆಫೀಸ್‍ನ ಈ ಹೊಸ ಸೇವೆ ನೆರವಾಗಲಿದೆ. ಪೇಮೆಂಟ್ ಬ್ಯಾಂಕ್‍ನಲ್ಲಿ 1 ಲಕ್ಷದವರೆಗೆ ಗ್ರಾಹಕರು ಹಣ ಜಮಾ ಮಾಡಬಹುದಾಗಿದೆ. ಹಣ ಜಮಾ, ವರ್ಗಾವಣೆ ಜೊತೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಆದರೆ ಸಾಮಾನ್ಯ ಬ್ಯಾಂಕ್‍ನಂತೆ ಸಾಲ
ನೀಡುವುದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ