ಇಂದಿನಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ

ನವದೆಹಲಿ, ಆ.22- ಫ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ರಾಷ್ಟ್ರಗಳ ಪ್ರವಾಸ ಆರಂಭಿಸಿದ್ದಾರೆ. ಅವರು ಇಂದಿನಿಂದ ಆ.26ರವರೆಗೆ ಫ್ರಾನ್ಸ್, ಯುಎಇ ಮತ್ತು ಬಹರೈನ್ ದೇಶಗಳಿಗೆ ಭೇಟಿ ನೀಡಲಿದ್ದು, ಆ ದೇಶಗಳೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಹೊಸ ಕ್ಷೇತ್ರದಲ್ಲಿ ಸಹಕಾರ ಅನ್ವೇಷಣೆಗೆ ನೆರವಾಗಲಿದೆ.

ತ್ರಿ-ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳುವ ಮುನ್ನ ತಮ್ಮ ಭೇಟಿ ಕುರಿತು ಹೇಳಿಕೆ ನೀಡಿರುವ ಅವರು ಭೇಟಿಯಿಂದ ಈ ದೇಶಗಳ ನಡುವಣ ಬಾಂಧ್ಯವ ಮತ್ತಷ್ಟು ಗಟ್ಟಿಯಾಗಲಿದೆ. ವಿವಿಧ ವಲಯಗಳಲ್ಲಿ ಹೊಸ ಸಹಭಾಗಿತ್ವಕ್ಕೆ ನಾಂದಿಯಾಗಲಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಇಂದು ಸಂಜೆ ಫ್ರಾನ್ಸ್ ತಲುಪಲಿದ್ದಾರೆ. ಇಂದು ಮತ್ತು ನಾಳೆ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಪ್ರಧಾನಮಂತ್ರಿ ಎಡೌರ್ಡ್‍ಫಿಲಿಪ್ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಲಿದ್ದು, ಶೃಂಗಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಫ್ರಾನ್ಸ್‍ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವ ಅವರು 1950 ಮತ್ತು 1960ರಲ್ಲಿ ಎರಡು ಏರ್ ಇಂಡಿಯಾ ವಿಮಾನ ದುರಂತಗಳಲ್ಲಿ ಮೃತಪಟ್ಟ ಭಾರತೀಯರ ಸ್ಮಾರಕವನ್ನು ಸಮರ್ಪಿಸಲಿದ್ದಾರೆ.

ಮೋದಿ ಆ.23 ಮತ್ತು 24ರಂರು ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ಗೆ ತೆರಳಲಿದ್ದು, ಅಬುಧಾಬಿ ರಾಜಕುಮಾರ ಶೇಖ್ ಮಹಮದ್ ಬಿನ್ ಜಯೆದ್ ಅಲಿ ನಹಯಾನ್ ಅವರನ್ನು ಭೇಟಿ ಮಾಡಿ ಚರ್ಚಿಸುವರು. ಇವರಿಬ್ಬರು ಮಹಾತ್ಮ ಗಾಂಧಿ ಅವರ 150ನೇ ಜನ್ಮಜಯಂತಿ ಪ್ರಯುಕ್ತ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮವಿದೆ. ಅಲ್ಲದೆ, ಮೋದಿ ಅರಭ್ ರಾಷ್ಟ್ರದಲ್ಲಿ ರುಪೈ ಕಾರ್ಡ್ ಅನಾವರಣಗೊಳಿಸುವರು.

ಆಗಸ್ಟ್ 24 ಮತ್ತು 25ರಂದು ಬಹರೈನ್‍ಗೆ ಮೋದಿ ಭೇಟಿ ನೀಡಲಿದ್ದಾರೆ. ಈ ಸಂಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಲಿದ್ಧಾರೆ.

ಬಳಿಕ ಅವರು ಆ.25 ಮತ್ತು 26ರಂದು ಜಿ=7 ಶೃಂಗಸಭೆಯಲ್ಲಿ ಭಾಗವಹಿಸುವರು. ಈ ಸಭೆಯಲ್ಲಿ ಪರಿಸರ, ಹಮಾಮಾನ, ವಾತಾವರಣ, ಸಾಗರ ಮತ್ತು ಡಿಜಿಟಲ್ ಪರಿವರ್ತನೆ ವಿಷಯಗ¼ ಕುರಿತು ಮುಖ್ಯವಾಗಿ ಚರ್ಚೆಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ