“ಶಶಾಂಕ್ ಸಿನಿಮಾಸ್” ನಿರ್ಮಾಣದ, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ, ಶಶಾಂಕ್ ನಿರ್ದೇಶನದ “ಪ್ರೊಡಕ್ಷನ್ ನಂಬರ್ – 2” ಚಿತ್ರದ ಮುಹೂರ್ತ ಈ ದಿನ ಬೆಳಿಗ್ಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ಶಶಾಂಕ್ ರವರ ಮಗಳು ಚೈತ್ರ ಶಶಾಂಕ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ನಿಶ್ವಿಕಾ ನಾಯ್ಡು ಮತ್ತು ರುಕ್ಮಿಣಿ (ಬೀರಬಲ್) ಉಪೇಂದ್ರ ಅವರೊಂದಿಗೆ ನಾಯಕಿಯರಾಗಿ ನಟಿಸಲಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಸುಜ್ಞಾನ್ ಛಾಯಾಗ್ರಹಣವಿದ್ದು, ಉಳಿದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ನಡೆದಿರುತ್ತದೆ.
ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಶೀರ್ಷಿಕೆಯೊಡನೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಸೆಪ್ಟೆಂಬರ್ ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.