ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ ಮೇಲೆ ಹಲ್ಲೆ ನಡೆಸಿದ್ದ ಪಾಕ್ ಸೈನಿಕನ ಹತ್ಯೆಗೈದ ಭಾರತೀಯ ಯೋಧರು

ನವದೆಹಲಿ: ಇದೇ ವರ್ಷ ಫೆ. 27ರಂದು ಪಾಕಿಸ್ತಾನದಲ್ಲಿ ಪತನಗೊಂಡಿದ್ದ ಯುದ್ಧವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನಿ ಸೈನಿಕರು ವಶಕ್ಕೆ ಪಡೆದಿದ್ದರು. ವೇಳೆ ವರ್ಧಮಾನ್ಮೇಲೆ ಹಲ್ಲೆಯನ್ನೂ ನಡೆಸಿ, ವರ್ಧಮಾನ್ಮುಖದಿಂದ ರಕ್ತ ಸೋರುತ್ತಿದ್ದ ಫೋಟೋವನ್ನು ಪಾಕ್ ರಿಲೀಸ್ ಮಾಡಿತ್ತು. ವೇಳೆ ಅಭಿನಂದನ್ ಮೇಲೆ ಹಲ್ಲೆ ನಡೆಸಿದ್ದ ಪಾಕಿಸ್ತಾನಿ ಸೈನಿಕನನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹೆಡೆಮುರಿ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ಫೋಟೋವನ್ನು ಪಾಕಿಸ್ತಾನ ರಿಲೀಸ್ ಮಾಡಿತ್ತು. ಆ ಫೋಟೋದಲ್ಲಿದ್ದ ಅಭಿನಂದನ್​ ಮೇಲೆ ಹಲ್ಲೆ ನಡೆಸಿದ್ದ ಪಾಕಿಸ್ತಾನಿ ಸೈನಿಕ ಅಹಮದ್​ ಖಾನ್​ ಇದೇ ತಿಂಗಳ 17ರಂದು ಕಾಶ್ಮೀರದ ನಕ್ಯಾಲ್ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಗೆ ನುಸುಳಲು ಪ್ರಯತ್ನಿಸಿದ್ದ. ಇದನ್ನು ಗಮನಿಸಿದ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಅಹಮದ್ ಖಾನ್​ ಸತ್ತಿದ್ದಾನೆ.

ಆ. 17ರಂದು ಪಾಕಿಸ್ತಾನದ ಸೈನಿಕರು ಕೃಷ್ಣ ಘಾಟಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ, ದೇಶದೊಳಗೆ ನುಸುಳಲು ಪ್ರಯತ್ನಿಸಿದ್ದರು. ಈ ವೇಳೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ್ದು, ಪಾಕಿಸ್ತಾನಿ ಸೈನಿಕ ಅಹಮದ್ ಖಾನ್ ಸಾವನ್ನಪ್ಪಿದ್ದಾನೆ. ಅಹಮದ್ ಖಾನ್ ಪಾಕಿಸ್ತಾನಿ ಸೇನೆಯಲ್ಲಿ ಸುಭೇದಾರ್ ಆಗಿ ಕೆಲಸ ಮಾಡುತ್ತಿದ್ದ.

ಬಾಲಾಕೋಟ್​ ಮೇಲೆ ನಡೆದ ಸರ್ಜಿಕಲ್ ದಾಳಿಯ ನಂತರ ಪಾಕಿಸ್ತಾನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿತ್ತು. ಈ ವೇಳೆ ಐಎಎಫ್ ಪೈಲಟ್ ಅಭಿನಂದನ್ ವರ್ಧಮಾನ್  ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಮಿಗ್-21 ವಿಮಾನ ಪಾಕಿಸ್ತಾನದಲ್ಲಿ ಪತನಗೊಂಡಿತ್ತು. ಆಗ ಪಾಕಿಸ್ತಾನದ ಕೆಲವು ಸೈನಿಕರು ಅಭಿನಂದನ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅವರನ್ನು ಪಾಕ್ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು. ಸುಮಾರು 58 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ