ಬೆಂಗಳೂರು,ಆ.18- ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ರಾಜ್ಯಕ್ಕೆ ದ್ರೋಹವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಆಪಾದಿಸಿದೆ.
ರಾಜ್ಯದ ನೆರೆ ಪೀಡಿತ ಪ್ರದೇಶಗಳ ಪರಿಹಾರಕ್ಕಾಗಿ 5 ಸಾವಿರ ಕೋಟಿ ರೂ.ಗಳನ್ನು ಮಧ್ಯಂತರ ಪರಿಹಾರ ಧನವಾಗಿ ಬಿಡುಗಡೆ ಮಾಡಲಿಲ್ಲ. ರಾಷ್ಟ್ರೀಯ ವಿಪತ್ತೆಂದು ಕೂಡ ಘೋಷಿಸಲಿಲ್ಲ. ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಒಂದು ಲಕ್ಷ ಕೋಟಿ ನಷ್ಟವಾದರೂ ಕೇಂದ್ರ ಸರ್ಕಾರ ಹಣ ನೀಡದೆ, ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಿಸದೆ ಕಣ್ಮುಚ್ಚಿ ಕುಳಿತಿದೆ ಎಂದು ಟೀಕಿಸಿದೆ.
ನೆರೆ ಪರಿಹಾರ ಕೇಳುವುದು ರಾಜ್ಯದ ಹಕ್ಕು.ರಾಜ್ಯದ ಹಕ್ಕನ್ನು ಪಡೆಯಲಾಗದಂತಹ ಹೇಡಿ ಮುಖ್ಯಮಂತ್ರಿಯೇ ಎಂದು ಯಡಿಯೂರಪ್ಪ ಅವರನ್ನು ಜರಿದಿದೆ.