ನವದೆಹಲಿ-ಭಾರತೀಯ ಸೇನೆ ನಮ್ಮ ಹೆಮ್ಮೆ. ಸೇನೆಯಲ್ಲಿನ ಸಮನ್ವಯತೆಯನ್ನು ಹೆಚ್ಚು ಮಾಡಲು ನಾನು ಇಂದು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡುತ್ತಿದ್ದೇನೆ. ಇನ್ನು ಮುಂದೆ ಮುಖ್ಯ ಸೇನಾ ಸಿಬ್ಬಂದಿ (ಸಿಡಿಎಸ್) ಹುದ್ದೆ ಸೃಷ್ಟಿಯ ಬಗ್ಗೆ ಘೋಷಣೆ ಮಾಡಿದರು. ಇವರು ಮೂರು ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
73ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾತನಾಡಿದರು. ಈ ವೇಳೆ ಹಲವು ಪ್ರಮುಖ ವಿಚಾರಗಳನ್ನು ಅವರು ಪ್ರಸ್ತಾಪಿಸಿದರು.
ಚೀಫ್ ಆಪ್ ಡಿಫೆನ್ಸ್ ಸ್ಟಾಫ್ ಹುದ್ದೆ ಸೃಷ್ಠಿಸಲಾಗುವುದು. ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರ ಮೇಲೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಮೂರೂ ಸೇನಾ ಪಡೆಗಳ ನಡುವೆ ಸಮನ್ವಯ ಸಾಧಿಸಲು, ರಕ್ಷಣಾ ಸಚಿವರ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮೋದಿ ತಿಳಿಸಿದರು.
ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಈ ಹಿನ್ನೆಲೆಯಲ್ಲಿ ಅಂದು ಉಪ ಪ್ರಧಾನಿಯಾಗಿ ಎಲ್.ಕೆ. ಅಡ್ವಾಣಿ ಅವರ ನೇತೃತ್ವದಲ್ಲಿ ಸಚಿವ ಸಮಿತಿ ರಚಿಸಲಾಗಿತ್ತು.
ಈ ಸಮಿತಿಯು ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಅದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಿತಿಯ ವರದಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
2012ರಲ್ಲಿ ನರೇಶ್ ಚಂದ್ರ ಟಾಸ್ಕ್ ಫೋರ್ಸ್ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರ ಸಮಿತಿ ರಚಿಸಿ ಅವರಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ಹಿರಿಯರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಅವರ ಶಿಫಾರಸು ಅನುಷ್ಠಾನಕ್ಕೆ ಬಂದಿರಲಿಲ್ಲ.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ.
ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಪ್ಲಾಸ್ಟಿಕ್ ಗೆ ವಿದಾಯ ಹೇಳೋಣ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಶ್ರಮಿಸೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ, ನಮ್ಮ ರುಪೇ ಕಾರ್ಡ್ ಸಿಂಗಾಪುರದಲ್ಲಿ ಚಲಾವಣೆಯಗುತ್ತಿದೆ. ಡಿಜಿಟಲ್ ಹಣ ವರ್ಗಾವಣೆಯನ್ನು ಪ್ರೋತ್ಸಾಹಿಸೋಣ. ಡಿಜಿಟಲ್ ವಹಿವಾಟಿನಿಂದ ದೇಶದ ಆರ್ಥಿಕತೆ ಹೆಚ್ಚಿಸೋಣ. ಹಾಗೆಯೇ ಪ್ರವಾಸಿ ತಾಣಗಳಿಗಾಗಿ ವಿದೇಶಕ್ಕೆ ಹೋಗುವ ಬದಲು 2022ರ ಹೊತ್ತಿದೆ ದೇಶದ ಪ್ರಮುಖ 15 ಪ್ರವಾಸಿ ತಾಣಗಳಿಗೆ ಭೇಟಿ ಕೊಡೋಣ. ಈ ಮೂಲಕ ದೇಶದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದರು.
ತ್ರಿವಳಿ ತಲಾಖ್ ಅಭ್ಯಾಸದಿಂದಾಗಿ ಬಳಲುತ್ತಿದ್ದ ಮುಸ್ಲಿಂ ಮಹಿಳೆಯರು ಎಷ್ಟು ಭಯಭೀತರಾಗಿದ್ದರು ಎಂಬುದನ್ನು ನೆನಪಿಡಿ, ಆದರೆ ನಾವು ಅದನ್ನು ಕೊನೆಗೊಳಿಸಿದ್ದೇವೆ. ಇಸ್ಲಾಮಿಕ್ ರಾಷ್ಟ್ರಗಳು ಇದನ್ನು ನಿಷೇಧಿಸಿದಾಗ ನಾವು ನಿಷೇಧಿಸಲು ಏಕೆ ಸಾಧ್ಯವಿಲ್ಲ? ನಾವು ಸತಿ ಪದ್ಧತಿಯನ್ನು ನಿಷೇಧಿಸಿರುವಾಗ, ಹೆಣ್ಣು ಶಿಶುಹತ್ಯೆ, ಬಾಲ್ಯ ವಿವಾಹದ ವಿರುದ್ಧ ನಾವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಾಗ, ತ್ರಿವಳಿ ತಲಾಖ್ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಸಮಸ್ಯೆಗಳನ್ನು ಸೃಷ್ಟಿಸಲು ಅಥವಾ ಎಳೆಯಲು ನಾವು ಬಯಸುವುದಿಲ್ಲ. ನಮ್ಮ ಹೊಸ ಸರ್ಕಾರ 70 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, 370 ನೇ ವಿಧಿಯನ್ನು ರದ್ದುಪಡಿಸಲಾಯಿತು ಮತ್ತು ಸಂಸತ್ತಿನ ಉಭಯ ಸದನಗಳಲ್ಲಿ, ಮೂರನೇ ಎರಡರಷ್ಟು ಸದಸ್ಯರು ಈ ಕ್ರಮವನ್ನು ಬೆಂಬಲಿಸಿದರು.
ಜಮ್ಮು, ಕಾಶ್ಮೀರ ಮತ್ತು ಲಡಾಖ್ನಲ್ಲಿನ ಹಳೆಯ ವ್ಯವಸ್ಥೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಕಾರಣವಾಯಿತು. ಆದರೆ ಮಹಿಳೆಯರು, ಮಕ್ಕಳು, ದಲಿತರು, ಬುಡಕಟ್ಟು ಸಮುದಾಯಗಳ ಹಕ್ಕುಗಳ ವಿಷಯದಲ್ಲಿ ಅನ್ಯಾಯವಾಯಿತು. ಕಾರ್ಮಿಕರ ಕನಸುಗಳು ಅಪೂರ್ಣವಾಗಿತ್ತು. ಇದನ್ನು ನಾವು ಹೇಗೆ ಸ್ವೀಕರಿಸಬಹುದು ಆರ್ಟಿಕಲ್ 370 ಅನ್ನು ಬೆಂಬಲಿಸಿದವರನ್ನು ಭಾರತ ಪ್ರಶ್ನಿಸುತ್ತಿದೆ? ಇದು ತುಂಬಾ ಮುಖ್ಯವಾಗಿದ್ದರೆ ಈ ಲೇಖನವನ್ನು ಏಕೆ ಶಾಶ್ವತಗೊಳಿಸಲಿಲ್ಲ? ಅದರ ತಾತ್ಕಾಲಿಕ ಸ್ಥಾನಮಾನವನ್ನು ಸುಲಭವಾಗಿ ತೆಗೆದುಹಾಕಬಹುದಿತ್ತು ಎಂದು ಹೇಳಿದರು.
ದೇಶದ ಮುಸ್ಲಿಂ ಸಹೋದರಿಯರು ಭಯದಿಂದ ಬದುಕುವಂತಾಗಿತ್ತು. ಆದರೆ ತ್ರಿವಳಿ ತಲಾಖ್ ರದ್ದು ಮಾಡುವ ಮೂಲಕ ಮುಸ್ಲೀಂ ಮಹಿಳೆಯರ ಸಂಕಷ್ಟ ನಿವಾರಿಸಿದ್ದೇವೆ. ಕಣಿವೆ ರಾಜ್ಯದಲ್ಲಿ ಅನಭಿವೃದ್ಧಿ, ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ 370ನೇ ವಿಧಿ ರದ್ದುಪಡಿಸುವ ಮೂಲಕ ಒಂದು ದೇಶಕ್ಕೆ ಒಂದೇ ಸಂವಿಧಾನ ಎಂಬ ಆಶಯವನ್ನು ಜಾರಿಗೆ ತರಲಾಗಿದೆ. ಒಂದು ದೇಶ ಒಂದು ಸಂವಿಧಾನ ಎಂದು ಹಿಂದೂಸ್ತಾನ ಹೇಳುತ್ತಿದೆ. ಜಿಎಸ್ ಟಿಯಿಂದ ಒಂದು ದೇಶ ಒಂದು ತೆರಿಗೆ ಸಾಕಾರವಾಗಿದೆ, ಈಗ ಒಂದು ದೇಶ ಒಂದು ಚುನಾವಣೆ ಎಂದು ಚರ್ಚೆಯಾಗುತ್ತಿದೆ ಎಂದರು.
ಸಂತ್ರಸ್ತರೊಂದಿಗೆ ನಾವಿದ್ದೇವೆ:
ನಾವಿಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ವರ್ಷ ದೇಶದಲ್ಲಿ ಅತಿವೃಷ್ಟಿ, ಪ್ರವಾಹದ ಕಾರಣ ದೇಶದ ಹಲವು ಭಾಗಗಳಲ್ಲಿ ಜನರು ಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹ ಸಂತ್ರಸ್ತರೊಂದಿಗೆ ನಾವಿದ್ದೇವೆ. ಅಂತಹವರ ಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ಹೊಸ ಸರ್ಕಾರ 10 ವಾರಗಳನ್ನು ಸಹ ಪೂರ್ಣಗೊಳಿಸಿಲ್ಲ, ಆದರೆ ಪ್ರತಿ ವಲಯದಲ್ಲೂ ಈ ಅಲ್ಪಾವಧಿಯಲ್ಲಿ ನಾವು ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದೇವೆ. # ಆರ್ಟಿಕಲ್ 370 ಮತ್ತು 35 ಎ ಅನ್ನು ಹಿಂತೆಗೆದುಕೊಳ್ಳುವುದು ಸರ್ದಾರ್ ಪಟೇಲ್ ಅವರ ಕನಸನ್ನು ನನಸು ಮಾಡುವ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಜನಸಂಖ್ಯೆ ಬಗ್ಗೆ ಜಾಗೃತಿ ಮೂಡಿಸಬೇಕು
ದೇಶದಲ್ಲಿ ಜನಸಂಖ್ಯೆಯ ಸ್ಫೋಟವು ಮುಂಬರುವ ಪೀಳಿಗೆಗೆ ವಿವಿಧ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದರೆ ಮಗುವಿನ ಜನನದ ಮೊದಲು ಯೋಚಿಸುವ ಜನರ ಒಂದು ನಿರ್ದಿಷ್ಟ ಭಾಗವಿದೆ ಎಂದು ನಾವು ಒಪ್ಪಿಕೊಳ್ಳಬೇಕಾಗಿದೆ. ನಾವು ಮಗುವಿಗೆ ಉತ್ತಮ ಭವಿಷ್ಯ ಒದಗಿಸಲು, ಮಗುವಿನ ಸೂಕ್ತ ಕಾಳಜಿ ನಮ್ಮಿದ ಸಾಧ್ಯವಾಗುತ್ತದೆಯೇ ಎಂಬುದನ್ನು ನಾವು ಯೋಚಿಸಬೇಕು. ಸಣ್ಣ ಕುಟುಂಬದ ನೀತಿಯನ್ನು ಅನುಸರಿಸುವವರು ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸುತ್ತಾರೆ, ಇದು ದೇಶಪ್ರೇಮದ ಒಂದು ರೂಪವೂ ಹೌದು. ಈ ವಿಷಯದ ಬಗ್ಗೆ ಸಾಮಾಜಿಕ ಜಾಗೃತಿಯ ಅವಶ್ಯಕತೆಯಿದೆ.
ಜನಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಕರೆ ನೀಡಿದರು.
ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಿ.
2022 ರೊಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಿ ಎಂದು ದೇಶದ ಜನತೆಗೆ ಮನವಿ ಮಾಡಿಕೊಂಡರು.
ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಹೆಚ್ಚಿನ ಹಣ ಹರಿದು ಬರುತ್ತಿದೆ. ಆದರೆ ದೇಶದ ಜನರು ರಜಾ ದಿನಗಳಲ್ಲಿ ಹೆಚ್ಚಾಗಿ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ನಮ್ಮ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ತುಂಬಾ ಅಪರೂಪ ಎಂಬಂತಾಗಿದೆ ಎಂದು ಹೇಳಿದರು.
ದೇಶದ ಜನರು 2022ರ ಒಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಬೇಕಿದೆ. ಎಲ್ಲಿ ನೀವು ಪ್ರವಾಸಕ್ಕೆ ಹೋಗುತ್ತಿರೋ ಅಲ್ಲಿ ಹೊಸ ಜಗತ್ತು ನಿರ್ಮಿಸಬಹುದು. ಭಾರತೀಯರು ಹೋಗುವ ಸ್ಥಳಗಳಿಗೆ ವಿದೇಶಿಯರು ಕೂಡ ಬರುತ್ತಾರೆ. ಈ ಮೂಲಕ ನಮ್ಮ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು.
ರೈತರಲ್ಲಿ ನನ್ನದೊಂದು ಮನವಿ ಇಡುತ್ತೇನೆ. ನಾವು ಈ ದೇಶವನ್ನು ತಾಯಿ ಎಂದುಕೊಳ್ಳುವವರು. ಆದರೆ ಭೂತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಹೊರತಾಗಿ ಹಾಳು ಮಾಡುತ್ತಿದ್ದೇವೆ. ಭಾರೀ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸುರಿಯುತ್ತಿದ್ದೇವೆ. ಹಂತ ಹಂತವಾಗಿ ರಾಸಾಯನಿಕಗಳಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಸಾಗಬೇಕಿದೆ ಎಂದು ಕೇಳಿಕೊಂಡರು.
ದೇಶವು ಬಾಹ್ಯಾಕಾಶದಲ್ಲಿ ಹೊಸ ಮೈಲುಗಲ್ಲು ಇಟ್ಟಿದೆ. ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಶೀಘ್ರದಲ್ಲೇ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ನಮಗೆ ಹೆಮ್ಮೆ ತರುವ ವಿಚಾರವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.